ಕನ್ನಡ ವಾರ್ತೆಗಳು

ಉಳಾಯಿಬೆಟ್ಟು ಪ್ರಕರಣದಲ್ಲಿ ಗ್ರಾಮಾಂತರ ಪೊಲೀಸರಿಂದ ಬದಲಿ ವ್ಯಕ್ತಿಯ ಬಂಧನ :ನಾಗರಿಕ ಸಮಿತಿ ಆರೋಪ

Pinterest LinkedIn Tumblr

Kankanady_Police_Protest_1

ಮಂಗಳೂರು, ಡಿ. 11: ಉಳಾಯಿಬೆಟ್ಟು ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ನಿರೀಕ್ಷಕರು ಅಮಾಯಕನೋರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಉಳಾಯಿಬೆಟ್ಟು ನಾಗರಿಕ ಸಮಿತಿಯ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಆರೋಪಿಸಿದ್ದಾರೆ.

ಗುರುವಾರ ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳಾಯಿಬೆಟ್ಟು ಪ್ರಕರಣದಲ್ಲಿ ಉಸ್ಮಾನ್ ಎಂಬವರ ಪುತ್ರ ಅಬೂಬಕರ್ ಸಿದ್ದೀಕ್ ಎಂಬವರ ಹೆಸರನ್ನು ದೂರುದಾರರು ಪೊಲೀಸರಿಗೆ ನೀಡಿದ್ದರು. ಆದರೆ ಠಾಣಾ ನಿರೀಕ್ಷಕರು ಆ ವ್ಯಕ್ತಿಯನ್ನು ಬಂಧಿಸುವ ಬದಲು ಶೇಕಬ್ಬ ಎಂಬವರ ಪುತ್ರ ಅಬೂಬಕರ್ ಸಿದ್ದೀಕ್ ಎಂಬವರನ್ನು ಬಂಧಿಸಿದ್ದಾರೆ. ಪೊಲೀಸರ ತಪ್ಪು ಗ್ರಹಿಕೆಯಿಂದ ಅಮಾಯಕನ ಬಂಧನವಾಗಿದೆ ಎಂದು ಅವರು ದೂರಿದರು.

ಉಳಾಯಿಬೆಟ್ಟು ಕೋಮುಗಲಭೆಗೆ ಸಂಬಂಧಿಸಿ ನೀಡಿದ್ದ ದೂರಿನಲ್ಲಿ 54 ಮಂದಿ ಮುಸ್ಲಿಮರ ಹೆಸರಿದೆ. ಆದರೆ ದೂರಿನಲ್ಲಿ ಶೇಕಬ್ಬರ ಪುತ್ರ ಅಬೂಬಕರ್ ಸಿದ್ದೀಕ್‌ ಎಂಬವರ ಹೆಸರೇ ಇಲ್ಲ. ಆದರೂ ವೃತ್ತ ನಿರೀಕ್ಷಕ ಪ್ರಮೋದ್ ಕುಮಾರ್ ಆತನ ಮೇಲೆ ಪ್ರಕರಣ ದಾಖಲಿಸಿ ಅನ್ಯಾಯ ಮಾಡಿದ್ದಾರೆ ಎಂದು ಸಮಿತಿಯ ಸದಸ್ಯ ಅಬ್ದುಲ್ ನಝೀರ್ ಆರೋಪಿಸಿದರು.

ಈ ಬಗ್ಗೆ ಉಳಾಯಿಬೆಟ್ಟು ನಾಗರಿಕ ಸಮಿತಿಯ ಕೆಲವರು ಹಾಗೂ ಅಬೂಬಕರ್‌ನ ಹೆತ್ತವರು ಗ್ರಾಮಾಂತರ ಠಾಣೆಗೆ ತೆರಳಿ ಪ್ರಮೋದ್ ಕುಮಾರ್‌ರನ್ನು ಭೇಟಿಯಾಗಿ ಅಮಾಯಕನ ಮೇಲೆ ಸುಳ್ಳು ಪ್ರಕರಣ ದಾಖಲಾಗಿರುವ ಬಗ್ಗೆ ಗಮನಕ್ಕೆ ತಂದಿದ್ದೆವು. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಉಳಾಯಿಬೆಟ್ಟುವಿನಲ್ಲಿ ಎಲ್ಲಾ ಕೋಮಿನವರು ಅನ್ಯೋನ್ಯತೆಯಿಂದ ಬಾಳುತ್ತಿದ್ದು, ಯಾರಿಗೂ ಯಾರೊಂದಿಗೂ ದ್ವೇಷವಿಲ್ಲ. ಆದರೆ ರಾಜಕೀಯ ಪಿತೂರಿಯಿಂದಾಗಿ ಸೌಹಾರ್ದದ ವಾತಾವರಣ ಹಾಳಾಗುತ್ತಿದೆ ಎಂದರು.

2014ರ ಡಿ.5ರಂದು ಉಳಾಯಿಬೆಟ್ಟು ಕೋಮುಗಲಭೆಗೆ ಸಂಬಂಸಿ ಮಂಗಳೂರು ಗ್ರಾಮಾಂತರ ಪೊಲೀಸರು ನಿರಂತರವಾಗಿ ಉಳಾಯಿಬೆಟ್ಟುವಿನ ಮುಸ್ಲಿಮ್ ಮನೆಗಳಿಗೆ ತೆರಳಿ ದೌರ್ಜನ್ಯ ಎಸಗುತ್ತಿದ್ದಾರೆ. ಪೊಲೀಸರ ಅತಿರೇಕದ ವರ್ತನೆ ಹಾಗೂ ಕೆಲವರ ಮೇಲೆ ದಾಖಲಾಗಿರುವ ಸುಳ್ಳು ಪ್ರಕರಣವನ್ನು ವಿರೋಸಿ ಉಳಾಯಿಬೆಟ್ಟು ಮುಸ್ಲಿಮ್ ಜಮಾಅತ್‌ನ ಸದಸ್ಯರು ಪೊಲೀಸ್ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದ್ದರು.

ಈ ಮನವಿ ಸಲ್ಲಿಸಿದ್ದ ಸಂದರ್ಭದಲ್ಲಿ ಶೇಕಬ್ಬರ ಮಗ ಅಬೂಬಕರ್ ಸಿದ್ದೀಕ್ ಕೂಡ ಹಾಜರಿದ್ದರು. ಇದೇ ನೆಪವಾಗಿಟ್ಟುಕೊಂಡು ಗ್ರಾಮಾಂತರ ಪೊಲೀಸರು ಈತನನ್ನು ಡಿ.7ರಂದು ಸಂಜೆ ಸುಮಾರು 5:40ಕ್ಕೆ ಕ್ರಿಕೆಟ್ ಆಡಿ ಮರಳುತ್ತಿದ್ದಾಗ ಉಳಾಯಿಬೆಟ್ಟು ಸರಕಾರಿ ಶಾಲೆಯ ಬಳಿ ಬಂಸಿ ಪ್ರಕರಣ ದಾಖಲಿಸಿದ್ದಾರೆ ಎಂದು ನಝೀರ್ ವಿವರಿಸಿದರು.

ಅಲ್ಲದೆ, ಉಳಾಯಿಬೆಟ್ಟು ಗಲಭೆಗೆ ಸಂಬಂಧಿಸಿ ಮುಹಮ್ಮದ್ ಶಹೀದ್ ಎಂಬವರು ಹಲ್ಲೆ ನಡೆಸಿದ ಎಂಟು ಮಂದಿ ಬಜರಂಗದಳದ ಕಾರ್ಯಕರ್ತರ ಮೇಲೆ ದೂರು ನೀಡಿದ್ದರು. ಆದರೆ, ಗ್ರಾಮಾಂತರ ಪೊಲೀಸರು ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವ ಬದಲು ದೂರುದಾರ ಮುಹಮ್ಮದ್ ಶಹೀದ್ ಮತ್ತು ಮುಹಮ್ಮದ್ ಇಕ್ಬಾಲ್ ಎಂಬಿಬ್ಬರನ್ನು ಬಂಧಿಸುವ ಮೂಲಕ ದೌರ್ಜನ್ಯ ಎಸಗಿದ್ದಾರೆ ಎಂದು ನಝೀರ್ ಆೋಪಿಸಿದರು.

ಸಮಿತಿಯ ಕಾರ್ಯದರ್ಶಿ ಸಿದ್ದೀಕ್ ಕೆಂಪುಗುಡ್ಡೆ, ಬಂತ ಅಬೂಬಕರ್ ಸಿದ್ದೀಕ್ ಸಂಬಂ ಅಬ್ದುಲ್ಲ, ಸಮಿತಿ ಸದಸ್ಯರಾದ ಮುಹಮ್ಮದ್ ಶರ್ೀ, ಅಮೀರ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Write A Comment