ಮನೋರಂಜನೆ

ಬಾಜಿರಾವ್ ಮಸ್ತಾನಿಗೆ ವಿರೋಧ: ಶಿವಸೇನೆ ವಿರುದ್ಧ ಪ್ರಿಯಾಂಕಾ ಕಿಡಿ

Pinterest LinkedIn Tumblr

priyanka

ನ್ಯೂಯಾರ್ಕ್: ಬಾಜಿರಾವ್ ಚಿತ್ರದ ಚಿತ್ರೀಕರಣ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ರೀತಿ ಸುದ್ದಿ ಮಾಡುತ್ತಲೇ ಬಂದಿದ್ದು, ಇದೀಗ ಚಿತ್ರದ ತಂಡಕ್ಕೆ ಬಿಡುಗಡೆಯ ಸಮಸ್ಯೆ ಎದುರಾಗಿದೆ.

ಚಿತ್ರ ಬಗ್ಗೆ ಈವರೆಗೂ ಸೃಷ್ಟಿಯಾದ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು ಇತಿಹಾಸ ಆಧಾರಿತ ಹಾಗೂ ಇತಿಹಾಸದಿಂದ ಸ್ಪೂರ್ತಿಗೊಂಡಿರುವುದಕ್ಕೂ ವ್ಯತ್ಯಾಸವಿದೆ. ಇತಿಹಾಸ ಪುಸ್ತಕವು ಎಲ್ಲವನ್ನು ಹೇಳುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತಂತೆ ನ್ಯೂಯಾರ್ಕ್ ನ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬದುಕುತ್ತಿದ್ದೇವೆ. ಇದೊಂದು ಸಿನಿಮಾವಷ್ಟೇ. ಇತಿಹಾರದಿಂದ ಸ್ಪೂರ್ತಿಗೊಂಡಿರುವುದಕ್ಕೂ, ಇತಿಹಾಸ ಆಧಾರಿತಕ್ಕೂ ವ್ಯತ್ಯಾವಿದೆ ಎಂದು ಹೇಳಿದ್ದಾರೆ.

ಬಾಜಿರಾವ್ ಸಿನಿಮಾ ಇತಿಹಾಸ ಪುಸ್ತಕದ ಆಧಾರಿತವಾದದ್ದು. ಪುಸ್ತಕ ಹಲವು ವರ್ಷಗಳ ಹಿಂದೆಯೇ ಬಿಡುಗಡೆಗೊಂಡಿದೆ. ಪುಸ್ತಕ ಬಿಡುಗಡೆಗೊಂಡಾಗ ಇಲ್ಲ ವಿವಾದ, ಬಹಿಷ್ಕಾರಗಳು ಸಿನಿಮಾ ಬಿಡುಗಡೆಯಾದಾಗಲೇ ಏಕೆ ಎದ್ದಿದೆ. ಸಿನಿಮಾದಿಂದ ಕೆಲವರಿಗೆ ನೋವುಂಟಾಗುವುದಾದರೆ, ಪುಸ್ತಕದಿಂದಲೂ ನೋವಾಗಬೇಕಿತ್ತು. ಪುಸ್ತಕವನ್ನು ಬಾಜಿರಾವ್ ಬಗ್ಗೆ ಬರೆಯಲಾಗಿದೆಯೇ ಹೊರತು ಅವರ ವೈಯಕ್ತಿಕ ಜೀವನದ ಬಗ್ಗೆಯಲ್ಲ.

ಅವರಿಗೂ ಒಂದು ಜೀವನವಿದೆ. ಅವರು ಊಟ ಮಾಡುವುದು, ಮನೆಯಲ್ಲಿರುವುದರಿಂದ ಏನಾಗಬೇಕಿದೆ. ಚಿತ್ರ ತಯಾರಕರಿಗೆ ನಿರ್ದೇಶಕರ ಚಿಂತನೆ ಹಾಗೂ ಆಲೋಚನೆಗಳನ್ನು ತೋರಿಸುವ ಹಕ್ಕಿದೆ. ಪುಸ್ತಕ ಎಲ್ಲವನ್ನೂ ಹೇಳುವುದಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಅಸಹಿಷ್ಣುತೆ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಅಸಹಿಷ್ಣುತೆ ಎಂಬುದು ಜಾಗತಿಕ ಸಮಸ್ಯೆ. ಪ್ರತಿ ದೇಶದಲ್ಲೂ ಈ ರೀತಿಯ ಸಮಸ್ಯೆಯಿದ್ದೇ ಇದೆ. ಅಸಹಿಷ್ಣುತೆಯನ್ನು ಹಿಡಿದುಕೊಂಡು ಒಬ್ಬರ ಮೇಲೆ ಬೆರಳು ತೋರಿಸುವುದನ್ನು ಬಿಟ್ಟು, ಪ್ಯಾರೀಸ್, ಲೆಬನಾನ್, ಮುಂಬೈಯನ್ನು ನೋಡಿ. ಎಲ್ಲಾ ದೇಶದಲ್ಲೂ ಸಮಸ್ಯೆಯೆಂಬುದು ಇದ್ದೇ ಇರುತ್ತದೆ. ಪ್ರತಿಯೊಂದು ಧರ್ಮದವರು ಇನ್ನೊಂದು ಧರ್ಮವನ್ನು ನೋಡಿ ಅದನ್ನು ಇಷ್ಟಪಡುವುದಿಲ್ಲ ಎಂದು ಹೇಳುತ್ತಾರೆ. ಇದರಿಂದಾಗಿ ಜನರು ವಿಭಾಗವಾಗುತ್ತಾರೆ. ಧರ್ಮ, ನಂಬಿಕೆ, ಸಂಸ್ಕೃತಿಗಳು ಬೇರೆಯಾಗುತ್ತದೆ. ಮೊದಲು ನಮ್ಮನ್ನು ಹಾಗೂ ನಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಬಾಜಿರಾವ್ ಮಸ್ತಾನಿ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಕನಸಿನ ಸಿನಿಮಾ ಹಾಗೂ ಬಹು ನಿರೀಕ್ಷಿತ ಚಿತ್ರವಾಗಿದೆ. ಚಿತ್ರ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ರೀತಿ ವಿವಾದದಲ್ಲಿ ಸಿಲುಕಿಕೊಳ್ಳುತ್ತಲೇ ಬಂದಿದೆ. ಈ ಹಿಂದೆ ಚಿತ್ರದ ಪಿಂಗಾ ಹಾಡು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಚಿತ್ರದಲ್ಲಿ ವಿವಾದಾತ್ಮಕ ದೃಶ್ಯಗಳು ಹೆಚ್ಚಾಗಿದ್ದು, ದೃಶ್ಯಗಳನ್ನು ತೆಗೆದುಹಾಕದೆ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಚಿತ್ರವನ್ನು ಮೊದಲು ಶಾಸಕರಿಗೆ ತೋರಿಸಿ ನಂತರ ಸಿನಿಮಾ ಬಿಡುಗಡೆ ಮಾಡಲಿ ಎಂದು ಮಹಾರಾಷ್ಟ್ರ ಶಿವಸೇನೆ ಹೇಳಿದೆ. ಅಲ್ಲದೆ, ಚಿತ್ರದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಥಾಣೆ ಜಿಲ್ಲೆಯ ಎಮ್ ಎಲ್ಎ ಪ್ರತಾಪ್ ಸಾರಣಿಕ್ ಮನವಿ ಪತ್ರವೊಂದನ್ನು ಸಲ್ಲಿಸಿದ್ದಾರೆಂದು ಹೇಳಲಾಗುತ್ತಿದೆ.

ಬಾಲಿವುಡ್ ನಲ್ಲಿ ಈಗಾಗಲೇ ಬಾಜಿರಾವ್ ಮಸ್ತಾನಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದ್ದು, ಚಿತ್ರವೊಂದು 17ನೇ ಶತಮಾನದ ಮರಾಠಿ ಪೇಶ್ವೆಯ ಯೋಧ ಬಾಜಿರಾವ್ ಅವರ ಜೀವನ ಚರಿತ್ರೆಯಾಧಾರಿತ ಸಿನಿಮಾವಾಗಿದೆ. ಚಿತ್ರದಲ್ಲಿ ಬಾಜಿರಾವ್ ಪ್ರೇಯಸಿಯಾಗಿ ದೀಪಿಕಾ ಪಡುಕೋಣೆ ಮಸ್ತಾನಿ ಪಾತ್ರ ನಿರ್ವಹಿಸಿದ್ದು, ರಾಣಿಯಾಗಿ ಕಾಶಿಬಾಯಿ ಪಾತ್ರದಲ್ಲಿ ಪ್ರಿಯಾಂಕ ಚೋಪ್ರಾ ನಟಿಸಿದ್ದಾರೆ.

Write A Comment