ಕರ್ನಾಟಕ

ಈ ಐವರು ಘಟಾನುಘಟಿಗಳಲ್ಲಿ ಬಿಗ್ ಬಾಸ್ ಮನೆಯಿಂದ ಯಾರು ಹೊರಬರತ್ತಾರೆ …?

Pinterest LinkedIn Tumblr

big-boss

ಬೆಂಗಳೂರು: ಶನಿವಾರ ಬಂತೆಂದರೆ ಬಿಗ್ ಬಾಸ್ ಮನೆಯಿಂದ ಒಬ್ಬ ಸ್ಪರ್ಧಿ ಎಲಿಮಿನೇಷನ್ ಮೂಲಕ ಮನೆಯಿಂದ ಹೊರಬರುವುದು ನಿಯಮ. ಈ ವಾರದ ಎಲಿಮಿನೇಷನ್ ಹಂತ ಸನ್ನಿಹಿತವಾಗುತ್ತಿದ್ದಂತೆ ಯಾರು ಮನೆಯಿಂದ ಹೊರಬರುತ್ತಾರೆ ಎಂಬ ಕುತೂಹಲ ಹೆಚ್ಚಾಗತೊಡಗಿದೆ.

ಕಳೆದ ಬಾರಿಯ ಅತಿಥಿ ದೇವೋ ಭವ ಟಾಸ್ಕಿನಲ್ಲಿ ಸೋತ ಕಾರಣ ಶೃತಿ, ಕೃತಿಕಾ ನೇತ್ರಾ ರೆಹಮಾನ್ ಮತ್ತು ಕಿಟ್ಟಿ ಈ ವಾರದ ಎಲಿಮಿನೇಷನ್ ಗೆ ನೇರವಾಗಿ ನಾಮಿನೇಟ್ ಆಗಿದ್ದರು. ಹಾಗೆ ನೋಡಿದರೆ ಈ ವಾರ ಬಿಗ್ಬಾಸ್ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರುವವರೆಲ್ಲರೂ ಘಟಾನುಘಟಿಗಳೇ.

ಕಿಟ್ಟಿ ಪ್ರತಿ ವಾರವೂ ಎಲಿಮಿನೇಷನ್ ಗೆ ನಾಮಾಂಕಿತರಾಗಿ ಹೊಸ ದಾಖಲೆ ನಿರ್ಮಿಸಿ ಆಗಿದೆ. ಇನ್ನು ಶೃತಿ ಅಕ್ಕ ಇದೇ ಇದೇ ಮೊದಲ ಬಾರಿಗೆ ಎಲಿಮಿನೇಷನ್ ಪಟ್ಟಿಯಲ್ಲಿದ್ದಾರೆ. ರೆಹಮಾನ್ ಅವರಂತೂ ಹಾಲಲ್ಲಾದರೂ ಹಾಕಲಿ ನೀರಲ್ಲಾದರೂ ಹಾಕಲಿ ಎಂಬಂತೆ ನಿರಾಳವಾಗಿದ್ದಾರೆ.

ಈ ಐವರಲ್ಲಿ ಅಭಿಮಾನಿಗಳು ಯಾರಿಗೆ ಮತ ಹಾಕಿ ಬಿಗ್ ಬಾಸ್ ಮನೆಯಲ್ಲಿ ಉಳಿಸುತ್ತಾರೆ? ಯಾವ ಸ್ಪರ್ಧಿಯನ್ನು ಮನೆಗೆ ಕಳಿಸುತ್ತಾರೆ ಎಂಬುದು ಸದ್ಯದ ಕುತೂಹಲ.

Write A Comment