ಮಂಗಳೂರು,ಡಿ.14: ಗೌಡ ಸಮುದಾಯದಲ್ಲಿ ಶಾಂತಿ, ಸಾಮರಸ್ಯ ಮತ್ತು ಸಮಾಜದ ಅಭಿವೃದ್ಧಿಗಾಗಿ ದುಡಿಯಬೇಕು ಹಾಗೂ ಮಕ್ಕಳಲ್ಲಿ ಜಾತಿ ಸಾಮರಸ್ಯದ ಹರಿವು ಮೂಡಿಸಬೇಕು. ಸಮಾಜದ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯ ಹಿರಿಯರಿಂದ ಆದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ನುಡಿದರು.
ಮಣ್ಣಗುಡ್ಡೆಯ ಸಂಘನಿಕೇತನದಲ್ಲಿ ನಡೆದ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ವಾರ್ಷಿಕ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು.
ಗೌಡ ಸಮುದಾಯದಲ್ಲಿ ಶತಮಾನಗಳ ಹಿಂದೆ ಸಾಕ್ಷರತೆಯ ಪ್ರಮಾಣ ಕೇವಲ ಶೇ. 4ರಷ್ಟಿತ್ತು. ಆದರೆ ಪ್ರಸ್ತುತ ಶೇ. 80ರಷ್ಟು ಇದೆ. ಉನ್ನತ ಹುದ್ದೆಗಳನ್ನು ಅಲಂಕರಿಸಿದ ಸಮುದಾಯದ ವ್ಯಕ್ತಿ ಗಳನ್ನು ಇಂದು ಕಾಣಬಹುದು. ಸಮು ದಾಯದ ಜನಗಣತಿ ಮಾಡುವ ಸಂಕಲ್ಪವನ್ನು ಈಗಾಗಲೇ ತಳೆಯ ಲಾಗಿದೆ. ಅದರೊಂದಿಗೆ ಸಾಕ್ಷರತಾ ಪ್ರಮಾಣವನ್ನೂ ಹೆಚ್ಚಿಸುವ ಚಿಂತನೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ, 500 ವರ್ಷಗಳ ಹಿಂದೆಯೇ ಗೌಡ ಸಮುದಾಯದ ನಾಯಕ ಕೆಂಪೇಗೌಡರು ಸ್ಮಾರ್ಟ್ ಸಿಟಿ ಪರಿಕಲ್ಪನೆ ಕೊಟ್ಟಿದ್ದರು. ಅಂತಹ ಕಲ್ಪನೆ ಆಧಾರಿತವಾಗಿಯೇ ಅವರು ಬೆಂಗಳೂರು ನಗರ ಕಟ್ಟಿದ್ದರು. ಬೆಂಗಳೂರು ತನ್ನ ಮೂಲ ಸ್ಥಿತಿಯ ಇಂದು ಇರುತ್ತಿದ್ದರೆ ಗಾಬೇìಜ್ ನಗರ ಎಂಬುದಾಗಿ ಗುರುತಿಸಿಕೊಳ್ಳುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಸಮುದಾಯದ ಉನ್ನತಿಗೆ ಪ್ರತಿ ಯೊಬ್ಬರೂ ಶ್ರಮಿಸಬೇಕು. ಸಾಂಘಿಕವಾಗಿ ದುಡಿಯುವುದರೊಂದಿಗೆ ವೈಯಕ್ತಿಕವಾಗಿ ಉತ್ತಮ ನಡವಳಿಕೆ ಹೊಂದಿದಲ್ಲಿ ಸಂಘಟನೆಯ ವೃದ್ಧಿ ಸಾಧ್ಯ ಎಂದು ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಕೆ. ಭೈರಪ್ಪ, ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಚಿನ್ನಪ್ಪ ಗೌಡ, ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ವಾಸುದೇವ ಗೌಡ ಪಡು³, ಬಂಟ್ವಾಳ ಸಂಘದ ಅಧ್ಯಕ್ಷ ಲಿಂಗಪ್ಪ ಗೌಡ ಕೆ., ಮೈಸೂರು ಕೆಎಸ್ಆರ್ಪಿ ಕಮಾಂಡೆಂಟ್ ರಾಮದಾಸ್ ಗೌಡ ಎಸ್., ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಧೃತಿ ಮುಂಡೋಡಿ, ಕೃಷಿಕ ಲಿಂಗಪ್ಪ ಪಡು³ ಅವರನ್ನು ಈ ವೇಳೆ ಸಮ್ಮಾನಿಸ ಲಾಯಿತು. ಎಸೆಸೆಲ್ಸಿಗಿಂತ ಮೇಲಿನ ವಿದ್ಯಾ ರ್ಹತೆಯ ಅಂತಿಮ ವರ್ಷದಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾವೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ನಾನಾ ಶಾಖಾ ಮಠಗಳ ಸ್ವಾಮೀಜಿಗಳು, ದ.ಕ. ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಸುಳ್ಯ ಅಕಾಡೆಮಿ ಆಫ್ ಲಿಬರಲ… ಎಜುಕೇಶನ್ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಕುರುಂಜಿ, ಪುತ್ತೂರು ಕೃಷಿಕ ಸಮಾಜದ ಅಧ್ಯಕ್ಷ ಸಂಜೀವ ಮಠಂದೂರು, ಗಂಗಾಧರ ಗೌಡ, ಕುಶಾಲಪ್ಪ ಗೌಡ, ನಿತ್ಯಾನಂದ ಮುಂಡೋಡಿ, ದಿನೇಶ್ ಮಡಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.