ಕನ್ನಡ ವಾರ್ತೆಗಳು

“ಮೀಲಾದ್ ಕೀಟ್” ಅರ್ಹ ಬಡ 20 ಕುಟುಂಬಕ್ಕೆ ಉಚಿತ ರೇಶನ್ ವಿತರಣಾ.

Pinterest LinkedIn Tumblr

ullala_reation_donat_1

ಉಳ್ಳಾಲ. ಡಿ, 14: ಬಡವರಿಗೆ ಸಹಾಯ ಮಾಡುವುದು ಅವರ ಕಷ್ಟಕರ ದಿನಗಳಲ್ಲಿ ಸ್ಪಂದಿಸುವುದು ಪ್ರವಾದಿಯವರಿಗೆ ಇಷ್ಟದ ಕಾರ್ಯ ಎಂದು ಸುನ್ನತ್ ಮಾಸಿಕ ಸಂಪಾದಕ ಖತೀಬ್ ಯುನುಸ್ ಇಮ್ದಾದಿ ಹೇಳಿದರು.

ಅವರು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧೀನದ ಅಲ್-ಅಮೀನ್ ರಿಲೀಫ್ ಫೌಂಡೇಶನ್ ವತಿಯಿಂದ ಪ್ರವಾದಿರವರ ಜನ್ಮ ತಿಂಗಳಿನ ಪ್ರಯುಕ್ತ “ಮೀಲಾದ್ ಕೀಟ್” ಅರ್ಹ ಬಡ 20 ಕುಟುಂಬಕ್ಕೆ ಉಚಿತ ರೇಶನ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ullala_reation_donat_2

ಅಲ್-ಅಮೀನ್ ರಿಲೀಫ್ ಫೌಂಡೇಶನ್ 20ಕುಟುಂಬಗಳಿಗೆ ಪ್ರವಾದಿ ಜನ್ಮದ ನೆನಪಿಗಾಗಿ ಒಂದು ತಿಂಗಳಿಗೆ ಬೇಕಾಗುವ ರೇಶನ್ ಸಮಾಗ್ರಿಗಳನ್ನು ನೀಡುವ ಈ ಉತ್ತಮ ಮಾದರಿ ಕಾರ್ಯಕ್ರಮ ಬೇರೆ ಬೇರ ಸಂಘ ಸಂಸ್ಥೆಗಳು ಮುಂದಿನ ದಿನಗಳಲ್ಲಿ ನಡೆಸಿ ಬರಲಿ ಎಂದು ಹೇಳಿದರು.

ಅಲ್-ಅಮೀನ್ ರಿಲೀಫ್ ಫೌಂಡೇಶನ್ ಚೇಯ್ಯಮಾನ್ ಮನ್ಸೂರ್ ಹಳೇಕೊಟೆ ಪ್ರಾಸ್ತವಿಕವಾಗಿ ಮಾತನಾಡಿದರು.ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಸಮದ್ ಅಹ್ಸನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುಂದರಿ ಭಾಗ್ ಖತೀಬ್ ಶರೀಫ್ ಸ‌ಅದಿ, ಅಲ್-ಅಮೀನ್ ರಿಲೀಫ್ ಫೌಂಡೇಶನ್ ಕೋಶಾಧಿಕಾರಿ ಫಾರೂಕ್ ಇಬಾ, ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷ ಮುಹಮ್ಮದ್ ಮದನಿ, ಎಸ್‌ವೈ‌ಎಸ್ ಮುಕ್ಕಚೇರಿ ಪ್ರ,ಕಾರ್ಯದರ್ಶಿ ಹೈದರ್, ಎಸ್ಸೆಸ್ಸೆಫ್ ಕೋಡಿ ಶಾಖಾಧ್ಯಕ್ಷ ಅತೀಕ್, ಎಸ್ಸೆಸ್ಸೆಫ್ ಸುಂದರಿಬಾಗ್ ಶಾಖಾಧ್ಯಕ್ಷ ಹಂಝ ಸುಂದರಿಬಾಗ್, ಅಲ್-ಅಮೀನ್ ರಿಲೀಫ್ ಫೌಂಡೇಶನ್ ಸದಸ್ಯರುಗಳಾದ ಮುಹಮ್ಮದ್ ಕೈಕೊ, ಹನೀಫ್ ಕಿಲ್ಲಾರಿಯ ನಗರ, ಅಬ್ದುಲ್ ಖಾನಿ ಹಳೇಕೊಟೆ, ಆಶ್ರಫ್ ಸುಂದರಿಬಾಗ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷ ಕುಬೈಬುಲ್ಲಾ ತಂಙಳ್ ಕಾರ್ಯಕ್ರಮ ನಿರೂಪಿಸಿದರು.

Write A Comment