ರಾಷ್ಟ್ರೀಯ

ರಹಸ್ಯ ದಾಳಿಯ ದೇಶೀ ಡ್ರೋಣ್ ತಯಾರಿಕೆಗೆ ಭಾರತ ಸಿದ್ಧತೆ

Pinterest LinkedIn Tumblr

drone

ನವದೆಹಲಿ, ಡಿ.14: ದೀರ್ಘ ಪರಿಶೀಲನೆಯ ನಂತರ ಭಾರತ ಕೊನೆಗೂ ರಹಸ್ಯ ಸಮರ ನಡೆಸುವ ಡ್ರೋಣ್ ಅಥವಾ ಮಾನವರಹಿತ ವಾಯುದಾಳಿ ವಾಹನ (ಯುಸಿಎಪಿ)ಗಳನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸುವ ನಿರ್ಧಾರ ಕೈಗೊಂಡಿದೆ. ಕ್ಷಿಪಣಿಗಳು, ಬಾಂಬ್‌ಗಳನ್ನು ಹೊತ್ತೊಯ್ದು ಶತ್ರುಪಾಳಯದ ಮೇಲೆ ದಾಳಿ ನಡೆಸಿ ಮತ್ತೆ ತಿರುಗಿ ಬಂದು ದಾಳಿಗೆ ಸಿದ್ಧವಾಗುವ ತಂತ್ರಜ್ಞಾನ ಅಳವಡಿಕೆಯ ಡ್ರೋಣ್‌ಗಳು, ಯುಸಿಎಪಿಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವೇದಿಕೆ ಸಿದ್ದಪಡಿಸಿದೆ. ಇವುಗಳ ಉತ್ಪಾದನೆಗಾಗಿ 2,650 ಕೋಟಿ ರೂ.ಗಳ ಘಟಕ ಸ್ಥಾಪನೆಯ ಯೋಜನೆಯನ್ನು ಕೇಂದ್ರ ಈಗಾಗಲೇ ಸಿದ್ಧಪಡಿಸಿದೆ. ಈ ಯೋಜನೆಯ ಬಗ್ಗೆ ಸೂಕ್ತ ವರದಿ ತಯಾರಿಸಲು ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ. ಇನ್ನು ಆರ್ಥಿಕ ಸಚಿವಾಲಯದ ಅನುಮೋದನೆ ನಂತರ ಸಂಪುಟ ಸಮಿತಿಯ ಮುಂದೆ ಬಂದರೆ ಯೋಜನೆ ಕಾರ್ಯಗತವಾದಂತೆಯೇ ಎಂದು ಮೂಲಗಳು ತಿಳಿಸಿವೆ.

Write A Comment