ಕರಾವಳಿ

ಕಾಂಗ್ರೆಸ್ ಪಕ್ಷದಿಂದ ಬಂಡಾಯ ಅಭ್ಯರ್ಥಿ ಜಯಪ್ರಕಾಶ್‌ಹೆಗ್ಡೆ, ಹರಿಕೃಷ್ಣ ಬಂಟ್ವಾಳ, ದಯಾನಂದ ರೆಡ್ಡಿ ಉಚ್ಚಾಟನೆ

Pinterest LinkedIn Tumblr

jaya

ಬೆಂಗಳೂರು, ಡಿ.14: ವಿಧಾನಪರಿಷತ್ ಚುನಾ ವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿರುವ ಮೂವರನ್ನು ಉಚ್ಚಾಟಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಘೋಸಿಸಿದ್ದಾರೆ.

ಇಂದು ಬೆಳಿಗ್ಗೆಯಷ್ಟೇ ಮುಖ್ಯಮಂತ್ರಿ ಸಿದರಮಯ್ಯ ಈ ಕುರಿತು ಖಚಿತ ಪಡಿಸಿದ್ದರು. ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಕುರಿತ ಪ್ರಾದೇಶಿಕ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಡಿದ ಅವರು, ಬೆಂಗಳೂರು ನಗರ ಜಿಲ್ಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ದಯಾನಂದ ರೆಡ್ಡಿ ಅವರ ಸವಾಲು ಡಿ.30ರಂದು ಪ್ರಕಟವಾಗುವ ಫಲಿತಾಂಶದಲ್ಲಿ ಗೊತ್ತಾಗಲಿದೆ ಎಂದು ವ್ಯಂಗ್ಯವಾಡಿದರು. ದಯಾನಂದ ರೆಡ್ಡಿ ಹಾಗೂ ಹಾಗೆಯೇ ಕರಾವಳಿ ಜಿಲ್ಲೆಯಲ್ಲಿ ಸ್ಪರ್ಧಿಸಿರುವ ಜಯಪ್ರಕಾಶ್‌ಹೆಗ್ಡೆ, ಹರಿಕೃಷ್ಣ ಬಂಟ್ವಾಳ ಅವರನ್ನೂ ಉಚ್ಛಾಟಿಸಲಾಗುವುದು ಎಂದರು.

ಧಾರವಾಡದಲ್ಲಿ ಪಕ್ಷದ ವತಿಯಿಂದಲೇ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದು ಹೇಳಿದರು.

ಒಬ್ಬರಿಗೊಂದು ನ್ಯಾಯ ಮತ್ತೊಬ್ಬರಿ ಇನ್ನೊಂದು ನ್ಯಾಯಾನಾ…

ಉಡುಪಿ.ಡಿ.14: ಒಬ್ಬರಿಗೊಂದು ನ್ಯಾಯ ಮತ್ತೊಬ್ಬರಿ ಇನ್ನೊಂದು ನ್ಯಾಯಾನಾ… ನನ್ನನ್ನು ಪಕ್ಷದಿಂದ ಉಚ್ಚಾಟಿಸುವ ಮೊದಲು ನನ್ನ ಪ್ರತಿಕ್ರಿಯೆ ಕೇಳಬಹುದಾಗಿತ್ತು ಎಂದು ಬಂಡಾಯ ಬಾವುಟ ಹಾರಿದಿರುವ ಮಾಜಿ ಸಂಸದ ಜಯಪ್ರಕಾಶ ಹೆಗಡೆ ಕೆಪಿಸಿಸಿ ಅಧ್ಯಕ್ಷರನ್ನು ಪ್ರಶ್ನಿಸಿದ್ದಾರೆ.

ಪಸ್ತುತ ಕಾಂಗ್ರೇಸ್ ಅಭ್ಯರ್ಥಿ ಪ್ರತಾಪ್ ಶೆಟ್ಟಿ ಕಳೆದ ವಿಧಾನ ಸಭೆ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುಚಟಿಗೆಯಲ್ಲಿ ತೊಡಗಿದ್ದರು ಆದರೇ ಆಗ ಸುಮ್ಮನಿದ್ದದ್ದು ಏಕೆ ಎಂದು ಕಿಡಿಕಾರಿದ್ದಾರೆ. ಪಕ್ಷಕ್ಕಾಗಿ ನಾನು ಪ್ರಾಮಾಣಿಕವಾಗಿ ದುಡಿದರು ಅವರು ಕಡೆಗಣಿಸಿದರು ಆದರೇ ನನ್ನ ಜನರು ನನ್ನ ಜೊತೆಗಿದ್ದಾರೆ, ಗೆಲುವು ನನ್ನದೇ ಎಂದು ತಿಳಿಸಿದ್ದಾರೆ.

ಮುಂಚೂಣಿಯಲ್ಲಿ ರಾಜ್ಯ:

ಆಡಳಿತ ಅನುಷ್ಠಾನದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಕೇಂದ್ರದಲ್ಲಿ ಮೊದಲ ಬಾರಿಗೆ ಜಾರಿಗೆ ತಂದ ಮೊಬೈಲ್ ಆಪ್ ಇತರೆ ರಾಜ್ಯಗಳಿಗೂ ಮಾದರಿ ಆಗಿದ್ದು, ಈಗಾಗಲೇ ಹಲವು ರಾಜ್ಯಗಳು ಅನುಸರಿಸಲು ಮುಂದಾಗಿವೆ ಎಂದು ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ತಿಳಿಸಿದರು. ತಂತ್ರಜ್ಞಾನದಲ್ಲಿ ರಾಜ್ಯ ಸಾಕಷ್ಟು ಪ್ರಗತಿ ಸಾಧಿಸಿದ್ದು, ಒಳ್ಳೆಯ ಹಾಗೂ ಪಾರದರ್ಶಕ ಆಡಳಿತ ನೀಡುತ್ತಾ ಪ್ರಗತಿ ಪಥದಲ್ಲಿ ಸಾಗಿದೆ ಎಂದರು. ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ತಂದು ಭೂಮಿ, ಸಕಾಲ, ಇ-ಖಜಾನೆ ಮೊದಲಾದ ಯೋಜನೆಗಳ ಮೂಲಕ ಜನರ ಬಳಿಗೆ ಆಡಳಿತ ಕೊಂಡೊಯ್ಯೊಲಾಗಿದೆ. ಸಾರ್ವಜನಿಕ ಅಭಿಪ್ರಾಯಕ್ಕೆ ಒತ್ತು ನೀಡಿ ಪಾರದರ್ಶಕ ಹಾಗೂ ಭ್ರಷ್ಟ ಮುಕ್ತ ಆಡಳಿತಕ್ಕೆ ಒತ್ತು ನೀಡಲಾಗಿದೆ.

ಆಧಾರ್ ವಿತರಣೆಯಲ್ಲೂ ಮುಂಚೂಣಿಯಲ್ಲಿರುವ ರಾಜ್ಯ ಸಕಾಲ ಯೋಜನೆ ಮೂಲಕ ಜನಸಾಮಾನ್ಯರಿಗೆ ಶೀಘ್ರ ಪರಿಹಾರ ಕಲ್ಪಿಸುತ್ತಿದೆ ಎಂದು ರಾಜ್ಯ ಸರ್ಕಾರದ ಮಹತ್ವದ ಮೊಬೈಲ್ ಆಪ್ ಬಳಕೆಯ ಪ್ರಯೋಜನವನ್ನು ಹೆಚ್ಚಿನ ಜನ ಪಡೆಯುತ್ತಿದ್ದು, ಪಾರದರ್ಶಕ ಆಡಳಿತ ನೇರ ಸಹಕಾರಕ್ಕೆ ನೆರವಾಗಿದೆ ಎಂದರು. ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ವಾರ್ತಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ರೋಷನ್ ಬೇಗ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಅಭಿವೃದ್ಧಿ ಆಯುಕ್ತೆ ಲತಾಕೃಷ್ಣರಾವ್, ಕೇಂದ್ರ ಸರ್ಕಾರದ ಆಡಳಿತ ಸುಧಾರಣಾ ಮತ್ತು ಸಾರ್ವಜನಿಕ ಕುಂದು-ಕೊರತೆ ಇಲಾಖೆ ಕಾರ್ಯದರ್ಶಿ ದೇವೇಂದ್ರ ಚೌಧರಿ, ರಾಜ್ಯ ಸರ್ಕಾರದ ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment