ಮನೋರಂಜನೆ

ಶಿವಣ್ಣ, ಸುದೀಪ್‌ ಕಲಿಗೆ 110 ಕೋಟಿ ಬಜೆಟ್‌! ಕನ್ನಡದ ದುಬಾರಿ ಸಿನಿಮಾ

Pinterest LinkedIn Tumblr

13ಬೆಂಗಳೂರು: “ಹ್ಯಾಟ್ರಿಕ್‌ ಹೀರೋ’ ಶಿವರಾಜಕುಮಾರ್‌ ಹಾಗೂ “ಕಿಚ್ಚ’ ಸುದೀಪ್‌ ಅವರು ಇದೇ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿರುವ ಬಹುನಿರೀಕ್ಷೆಯ ಸಿನಿಮಾಕ್ಕೆ “ಕಲಿ’ ಎಂಬ ಹೆಸರಿಡಲಾಗಿದೆ. ಕನ್ನಡ ಚಿತ್ರರಂಗದ ಇತಿಹಾಸ ದಲ್ಲೇ ಅತ್ಯಂತ ಬೃಹತ್‌ ಬಜೆಟ್‌ನ ಚಿತ್ರ ಇದಾಗಿದ್ದು, ಬರೋಬ್ಬರಿ 110 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

ಕನ್ನಡ ಜತೆಗೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಈ ಚಿತ್ರ ತೆರೆ ಕಾಣಲಿದ್ದು, “ಜೋಗಿ’ ಪ್ರೇಮ್‌ ನಿರ್ದೇಶನ ಮಾಡಲಿದ್ದಾರೆ. ಮುಂಬರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕೋಲಾರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಿ.ಆರ್‌. ಮನೋಹರ್‌ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಸಂಜೆ ನಡೆದ ಅದ್ದೂರಿ ಸಮಾರಂಭದಲ್ಲಿ “ಕಲಿ’ ಚಿತ್ರದ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು. ಈ ಸಿನಿಮಾಕ್ಕೆ “ವಾರಿಯರ್‌- ರೂಲರ್‌’ ಎಂಬ ಅಡಿಶೀರ್ಷಿಕೆಯನ್ನು ನೀಡಲಾಗಿದೆ.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಕನ್ನಡ ಚಿತ್ರರಂಗದ ಯಶಸ್ವಿ ನಟರಾದ ಶಿವರಾಜಕುಮಾರ್‌,ಸುದೀಪ್‌ ಹಾಗೂ ನಿರ್ದೇಶಕ ಪ್ರೇಮ್‌ ಅವರು ಅತೀ ಬುದಿಟಛಿವಂತ ನಟರು. ಇವರು ಒಟ್ಟಾಗಿ ಸೇರಿ “ಕಲಿ’ ಚಿತ್ರವನ್ನು ಮಾಡುತ್ತಿದ್ದಾರೆ.

ಹಾಗಾಗಿ ಈ ಚಿತ್ರದ ಮೇಲೆ ನಿರೀಕ್ಷೆ ಜಾಸ್ತಿ ಇದೆ. ಪ್ರೇಕ್ಷಕರು ಮತ್ತು ಆ ಇಬ್ಬರು ನಟರ ಅಭಿಮಾನಿಗಳಲ್ಲೂ ಸಹಜವಾಗಿಯೇ ನಿರೀಕ್ಷೆಗಳು ಹೆಚ್ಚಾಗಿರುತ್ತವೆ. ಅವರ ನಿರೀಕ್ಷೆ ಹುಸಿಯಾಗದಂತೆ ಚಿತ್ರವನ್ನು ಚೆನ್ನಾಗಿ ಮಾಡಬೇಕು. ಈ ಚಿತ್ರ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು. 2012ರಲ್ಲಿ ತೆರೆ ಕಂಡ “ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಅಭಿನಯದ “ಸಂಗೊಳ್ಳಿ ರಾಯಣ್ಣ’ ಸಿನಿಮಾ ಕನ್ನಡ ಚಿತ್ರರಂಗದ ಅದೂಟಛಿರಿ ಬಜೆಟ್‌ನ ಸಿನಿಮಾವಾಗಿತ್ತು. ಆ ಚಿತ್ರವನ್ನು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು.
&ಉದಯವಾಣಿ

Write A Comment