ಕರ್ನಾಟಕ

ನಕಲಿ ದಾಖಲೆ ಸೃಷ್ಟಿಸಿ ಸಿಮ್‌ಕಾರ್ಡ್‌ಗಳ ಮಾರಾಟ ನಾಲ್ವರ ಬಂಧನ

Pinterest LinkedIn Tumblr

simಬೆಂಗಳೂರು, ಡಿ.14- ನಕಲಿ ದಾಖಲೆ ಸೃಷ್ಟಿಸಿ ಸಿಮ್ ಕಾರ್ಡ್‌ಗಳನ್ನು ಆಕ್ಟಿವೇಷನ್ ಮಾಡುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿವಿಧ ಕಂಪೆನಿಗಳ ಸಿಮ್ ಕಾರ್ಡ್‌ಗಳು, ನಕಲಿ ದಾಖಲೆಗಳು ಹಾಗೂ ಇತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ವಿದ್ಯಾರಣ್ಯಪುರದ ಮಹಮ್ಮದ್ ಇಸ್ಮಾಯಿಲ್ (43), ಮಹಮ್ಮದ್ ಜಾಫರ್(38), ಟಿ.ದಾಸರಹಳ್ಳಿಯ ಚಂದ್ರಶೇಖರ್ (41), ಯಲಹಂಕದ ವಾಸು (19) ಬಂಧಿತರು.

ಸಿಮ್ ಕಾರ್ಡ್ ಪಡೆಯಲು ಗ್ರಾಹಕರು ನೀಡುವ ದಾಖಲೆಗಳನ್ನು ಉಪಯೋಗಿಸಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿವಿಧ ಕಂಪೆನಿಗಳ ಸಿಮ್ ಕಾರ್ಡ್‌ಗಳನ್ನು ಆಕ್ಟಿವೇಟ್ ಮಾಡಿ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಆರೋಪಿ ಮಹಮ್ಮದ್ ಇಸ್ಮಾಯಿಲ್‌ನಿಂದ ಟಾಟಾ ಡೊಕೊಮೊ-147, ಏರ್‌ಟೆಲ್-20, ಐಡಿಯಾ-13, ರಿಲಯನ್ಸ್-22 ಸಿಮ್ ಕಾರ್ಡ್‌ಗಳು ಹಾಗೂ ನಾಲ್ಕು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಹಮ್ಮದ್ ಜಾಫರ್‌ನಿಂದ ಕೃತ್ಯಕ್ಕೆ ಬಳಸಿದ್ದ ಕಂಪ್ಯೂಟರ್ ಮತ್ತಿತರ ಉಪಕರಣಗಳು, ಸ್ಟಿಕ್ಕರ್‌ಗಳು, ನಕಲಿ ದಾಖಲೆಗಳು, ನಕಲಿ ಸೀಲ್, ವಿವಿಧ ಹೆಸರಿನ  ಗುರುತಿನ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಂದ್ರಶೇಖರ್‌ನಿಂದ ಗ್ರಾಹಕರೊಬ್ಬರ ದಾಖಲೆ ಬಳಸಿ ಆಕ್ಟಿವೇಟ್ ಮಾಡಿ ಮಾರಾಟಕ್ಕಿಟ್ಟಿದ್ದ 12ಸಿಮ್‌ಕಾರ್ಡ್‌ಗಳು, 7 ಸಾವಿರರೂ. ನಗದು, ವಾಸುನಿಂದ 12 ಸಿಮ್‌ಕಾರ್ಡ್‌ಗಳು, 3 ರಬ್ಬರ್‌ಸ್ಟ್ಯಾಂಪ್‌ಗಳು, 2500 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಅಸಲಿ ಗ್ರಾಹಕರಿಗೆ ಅವರ ದಾಖಲಾತಿ ದುರ್ಬಳಕೆಯಾಗುತ್ತಿರುವ ವಿಚಾರ ಗಮನಕ್ಕೆ ಬಾರದ ರೀತಿಯಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Write A Comment