ರಾಷ್ಟ್ರೀಯ

ರಾಹುಲ್ ಗಾಂಧಿ ಆರೋಪ ತಳ್ಳಿಹಾಕಿದ ಆರ್ ಎಸ್ಎಸ್

Pinterest LinkedIn Tumblr

RSSನವದೆಹಲಿ: “ನಾನು ಅಸ್ಸಾಂನ ಬರ್‌ಪೇಟಾ ಸತ್ರ ದೇಗುಲಕ್ಕೆ ಹೋಗಬೇಕಾದರೆ ಆರೆಸ್ಸೆಸ್ ನವರು ನನ್ನನ್ನು ತಡೆದರು” ಎಂಬ ರಾಹುಲ್ ಗಾಂಧಿ ಅವರ ಆರೋಪವನ್ನು ಆರ್ ಎಸ್ ಎಸ್ ತಳ್ಳಿಹಾಕಿದೆ.

ನಿರ್ಮಲ್ ಕಠಾರಿಯಿಂದ ರಾಹುಲ್ ಗಾಂಧಿ ವರೆಗೆ ಆರ್ ಎಸ್ಎಸ್ ಕುರಿತು ಸುಳ್ಳು ಹೇಳುವುದು ಕಾಂಗ್ರೆಸ್ ನಾಯಕರ ಹಳೆಯ ಚಾಳಿ ಎಂದು ಆರ್ ಎಸ್ಎಸ್ ನ ಮಾಧ್ಯಮ ವಿಭಾದ ಮುಖ್ಯಸ್ಥ ಮನಮೋಹನ್ ವೈದ್ಯ ಹೇಳಿದ್ದಾರೆ.

ನಾನು ಅಸ್ಸಾಂನ ಬರ್‌ಪೇಟಾ ಸತ್ರ ದೇಗುಲಕ್ಕೆ ಹೋಗಬೇಕಾದರೆ ಆರೆಸ್ಸೆಸ್ ನವರು ನನ್ನನ್ನು ತಡೆದರು. ನಾನು ದೇವಾಲಯಕ್ಕೆ ಹೋಗದಂತೆ ತಡೆಯಲು ಅವರ್ಯಾರು ಎಂದು ರಾಹುಲ್ ಗಾಂಧಿ ಹೇಳಿದ್ದರು.

ಚೆನ್ನೈ ನಲ್ಲಿ ರಕ್ಷಣಾ ಕಾರ್ಯಾಚರಣೆ  ನಡೆಸುತ್ತಿದ್ದ ಆರ್ ಎಸ್ಎಸ್ ಫೋಟೊವನ್ನು ಎಡಿಟ್ ಮಾಡಿ ರಕ್ಷಣಾ ಕಾರ್ಯಾಚರಣೆಗೆ ಆರ್ ಎಸ್ಎಸ್ ಅಡ್ಡಿ ಪಡಿಸುತ್ತಿತ್ತು ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖಂಡ ನಿರ್ಮಲ್ ಕಠಾರಿ ಆರೋಪಿಸಿದ್ದರು. ಆರ್ ಎಸ್ಎಸ್ ಕುರಿತು ಸುಳ್ಳು ಆರೋಪ ಮಾಡಿದ್ದಾರೆ ಎಂದು ನಿರ್ಮಲ್ ಕಠಾರಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಕೂಡಲೇ ಆರ್ ಎಸ್ಎಸ್ ಫೋಟೊವನ್ನು ಎಡಿಟ್ ಮಾಡಿದ್ದರ ಬಗ್ಗೆ ಕಠಾರಿ ವಿಷಾದ ವ್ಯಕ್ತಪಡಿಸಿದ್ದರು. ಈಗ ಕಠಾರಿಯಂತೆಯೇ ರಾಹುಲ್ ಗಾಂಧಿ ಸಹ ಆರ್ ಎಸ್ಎಸ್ ವಿರುದ್ಧ ರಾಹುಲ್ ಗಾಂಧಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರ್ ಎಸ್ಎಸ್ ಹೇಳಿದೆ.

Write A Comment