ಕರ್ನಾಟಕ

ಕಳ್ಳನಾದ ವಿದ್ಯಾರ್ಥಿಯಿಂದ 11 ಲಕ್ಷ ಮೌಲ್ಯದ ಮೊಬೈಲ್‌ಗಳು ವಶ

Pinterest LinkedIn Tumblr

mobileಬೆಂಗಳೂರು, ಡಿ.14- ಕದ್ದ ಮೊಬೈಲ್ ಮಾರುತ್ತಿದ್ದವನು ಸೇರಿದಂತೆ ಮೋಜಿನ ಜೀವನಕ್ಕಾಗಿ ಕಳವು ಮಾಡಿದ್ದ ಐವರನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿ 11.60 ಲಕ್ಷ ರೂ. ಮೌಲ್ಯದ ಮೊಬೈಲ್‌ಗಳು, 1.50ಲಕ್ಷ ರೂ. ಚಿನ್ನಾಭರಣ,  ಇನೋವಾ ಕಾರ್, 92 ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಮೊಬೈಲ್ ಕಳ್ಳನ ಸೆರೆ: ಕದ್ದ ಮೊಬೈಲ್‌ಗಳನ್ನು ಮಾರುತ್ತಿದ್ದ ವಿದ್ಯಾನಗರ ಕ್ರಾಸ್ ನಿವಾಸಿ ಶ್ರೀಕಾಂತ್ (21) ಎಂಬಾತನನ್ನು ಬಂಧಿಸಿದ್ದಾರೆ.

11.60ಲಕ್ಷ ರೂ. ಮೌಲ್ಯದ ಮೊಬೈಲ್‌ಗಳನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿವಿಧ ಮಾದರಿಯ ಸ್ಯಾಮ್‌ಸಂಗ್ ಕಂಪೆನಿಯ 90 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment