ರಾಷ್ಟ್ರೀಯ

ಪಾಕ್ ಪ್ರವಾಸ: ರಾಜ್ಯಸಭೆಗೆ ಮಾಹಿತಿ ನೀಡಿದ ಸಚಿವೆ ಸುಷ್ಮಾ

Pinterest LinkedIn Tumblr

New Delhi: External Affairs Minister Sushma Swaraj addressing a press conference at Jawaharlal Nehru Bhawan in New Delhi on Monday. PTI Photo by Vijay Verma (PTI9_8_2014_000176B)

ಹೊಸದಿಲ್ಲಿ, ಡಿ.14: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಇಂದು ಬೆಳಗ್ಗೆ ರಾಜ್ಯ ಸಭೆಗೆ ಇತ್ತೀಚೆಗೆ ಪಾಕಿಸ್ತಾನಕ್ಕೆ ನೀಡಿರುವ ಎರಡು ದಿನಗಳ ಭೇಟಿಯ ವೇಳೆ ನಡೆಸಲಾದ ದ್ವಿಪಕ್ಷೀಯ ಮಾತುಕತೆಯ ವಿವರ ನೀಡಿದರು.

ಸಚಿವೆ ಸುಷ್ಮಾ ಸದನಕ್ಕೆ ಮಾಹಿತಿ ನೀಡುತ್ತಿದ್ದಂತೆ ವಿಪಕ್ಷ ಸದಸ್ಯರು ಅವರ ಭಾಷಣಕ್ಕೆ ಅಡ್ಡಪಡಿಸಿದರು. ಅವರ ಹೇಳಿಕೆ ಮುಗಿದ ಬಳಿಕವೂ ವಿಪಕ್ಷ ಸದಸ್ಯರು ಸರಕಾರದ ವಿರುದ್ಧ ಘೋಷಣೆ ಕೂಗುವುದನ್ನು ನಿಲ್ಲಿಸೆ ಇದ್ದಾಗ ರಾಜ್ಯಸಭೆಯ ಕಲಾಪವನ್ನು ಮುಂದೂಡಲಾಯಿತು.

ಇತ್ತೀಚೆಗೆ ಅವರು ಪಾಕಿಸ್ತಾನದ ಇಸ್ಲಾಮಾಬಾದ್‌ ನಲ್ಲಿ .ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಮತ್ತು ಅವರ ಸಲಹೆಗಾರ, ಮಾಜಿ ವಿದೇ ಶಾಂಗ ಸಚಿವ ಸರ್ತಾಜ್‌ ಅಜೀಜ್‌ ಅವರ ಜತೆ ಮಾತುಕತೆ ನಡೆಸಿದ್ದರು.

Write A Comment