ಕನ್ನಡ ವಾರ್ತೆಗಳು

ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ ವಿರೋಧಿ ನೀತಿಯನ್ನು ವಿರೋಧಿಸಿ ಜಂಟಿ ಪ್ರತಿಭಟನೆ

Pinterest LinkedIn Tumblr

farmer_protest_1

ಮಂಗಳೂರು,ಡಿ.15 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ಕರ್ನಾಟಕ ಪ್ರಾಂತ್ಯಾ ರೈತ ಸಂಘ, ದ ಕ ಜಿಲ್ಲಾ ಸಮಿತಿ ಇದರ ಸಂಯುಕ್ತ ಅಶ್ರಯದಲ್ಲಿ ಜಂಟಿ ಪ್ರತಿಭಟನಾ ಸಭೆಯು ನಗರದ ಜಿಲ್ಲಾಧಿಕಾರಿ ಕಛೇರಿ ಮುಂದೆ ಮಂಗಳವಾರ ನಡೆಯಿತು.

ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಹಾಗೂ ಕೃಷಿ ಕ್ಷೇತ್ರ, ಕೃಷಿಕರನ್ನು ಸಂರಕ್ಷಿಸಲು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ ವಿರೋಧಿ ನೀತಿಯನ್ನು ವಿರೋಧಿಸಿ ಈ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೀಯಾನ್ ಹೇಳಿದರು.

farmer_protest_4 farmer_protest_2 farmer_protest_3

ಕಳೆದ ಆರು ತಿಂಗಳಿನಿಂದ ನಮ್ಮ ರಾಜ್ಯದಲ್ಲಿ 800ಕ್ಕಿಂತಲೂ ಅಧಿಕ ರೈತರ ಆತ್ಮಹತ್ಯೆ ನಡೆದಿದೆ. ಕಳೆದ 15  ವರ್ಷಗಳಿಂದ ದೇಶದಲ್ಲಿ 3.02.016 ರೈತರು ಅತ್ಮಹತ್ಯೆಹ್ಗೆ ಬಲಿಯಾಗಿದ್ದಾರೆ ಸರಕಾರದ ದಾಖಲೆ ಪ್ರಕಾರ ಪ್ರತಿನಿತ್ಯ 4268 ರೈತರು ಕೃಷಿ ಕ್ಷೇತ್ರದಿಂದ ಬದಲೀ ಕ್ಷೇತ್ರದ ಕಡೆ ವಾಲುತ್ತಿದ್ದಾರೆ. ಜಾಗತೀಕರಣ ದ ನೀತಿಗಳು ಕೃಷಿಕ್ಷೇತ್ರವನ್ನು ಅನುತ್ಪಾದಕ ಕ್ಷೇತ್ರವಾಗಿ ಮಾರ್ಪಾಡು ಮಾಡಿದೆ. ಇತಂಹ ಸಂದ್ಗಿಗ್ದ ಸಮಯದಲ್ಲೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ವಿರೋದಿ ನೀತಿಗಳನ್ನು ಮಾಡುತ್ತಿದ್ದು ದೇಶದ್ಯಾದಂತ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ದುಡಿಯುವ ಜನರ ಬದುಕು ದುಸ್ತರವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ದ ಕ ಜಿಲ್ಲಾ ಘಟಕದ ಅಧ್ಯಕ್ಷರಾದ ರವಿಕಿರಣ್ ಪುಣಚ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

Write A Comment