ಅಂತರಾಷ್ಟ್ರೀಯ

ಟೈರ್ ಸ್ಫೋಟಗೊಂಡುನದಿಗೆ ಉರುಳಿದ ಬಸ್ : 43 ಜನ ಸೇನಾಧಿಕಾರಿಗಳ ದುರ್ಮರಣ

Pinterest LinkedIn Tumblr

acid

ಅರ್ಜೆಂಟೀನಾ, ಡಿ.15: ಅರ್ಜೆಂಟೀನಾದ ಉತ್ತರ ಪ್ರಾಂತ್ಯದಲ್ಲಿರುವ ಸಾಲ್ಟಾದಲ್ಲಿ ಸೇನಾ ಬಸ್‌ನ ಟೈರ್ ಸ್ಫೋಟಗೊಂಡು, ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದ ಬಸ್ ಸೇತುವೆಯ ಮೇಲಿನಿಂದ ಒಣಗಿದ್ದ ನದಿಗೆ ಬಿದ್ದು 43 ಮಂದಿ ಅಧಿಕಾರಿಗಳು ಮೃತಪಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ.

ದೇಶದ ಗಡಿಗೆ ಹೊಂದಿಕೊಂಡಿರುವ ಬೊಲೀವಿಯಾ, ಚಿಲಿ ಮತ್ತು ಪರಾಗ್ವೆ ಗಡಿಗಳ ಸಾಲ್ಟಾ ಪ್ರದೇಶದಲ್ಲಿ ಭದ್ರತಾ ಅಧಿಕಾರಿಗಳು ಮೂರು ಬಸ್‌ಗಳಲ್ಲಿ ಪಹರೆ ನಡೆಸುವ ಕಾರ್ಯಕ್ರಮದಲ್ಲಿ ಈ ಅಧಿಕಾರಿಗಳಿದ್ದ ಬಸ್ ಕೂಡ ಒಂದು. ಯೂರೋಪ್‌ಗೆ ಆಂಡಿಯನ್ ಕೊಕೇನ್ ಮಾದಕ ವಸ್ತು ಸಾಗಾಟ ಹಾಗೂ ಮಾನವಕಳ್ಳ ಸಾಗಣೆಗಳು ಈ ಗಡಿಭಾಗದಲ್ಲಿ ವಿಪರೀತವಾಗಿದ್ದು ಸಿರಿಯಾ, ಇರಾಕ್‌ಗಳಿಂದ ಬರುವ ನಿರಾಶ್ರಿತರನ್ನು ಕಳ್ಳ ಸಾಗಾಟದ ಮೂಲಕ ಇತರ ದೇಶಗಳಿಗೆ ರವಾನಿಸುವ ದಂಧೆಕೋರರು ಹೆಚ್ಚಿರುವುದರಿಂದ ಈ ಭಾಗದಲ್ಲಿ ನಿರಂತರವಾಗಿ ಸೈನಿಕರು ಮತ್ತು ಸೇನಾಧಿಕಾರಿಗಳು ಪಹರೆ ನಡೆಸುತ್ತಾರೆ.

Write A Comment