ಮುಂಬಯಿ: ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಇದೀಗ ಮತ್ತೂಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ಮಗುವನ್ನು ಹೆರುವ ಮೂಲಕ ತಾಯಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಸನ್ನಿ ಹಾಗೂ ಪತಿ ಡೇನಿಯಲ್ ವೇಬರ್ ದಂಪತಿ, ಮಗುವನ್ನು ಪಡೆಯುವ ಬಯಕೆಯನ್ನು ಹೊರಹಾಕಿದ್ದಾರೆ.
ಮಗುವನ್ನು ಹೊಂದಲು ಸೂಕ್ತ ಸಮಯವನ್ನು ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ಇಬ್ಬರಿಗೂ ಮಗುವಿನ ಆಸೆಯಿದೆ. ಅದಕ್ಕಾಗಿ ಅತ್ಯುತ್ತಮ ಸಮಯವನ್ನು ಎದುರು ನೋಡುತ್ತಿದ್ದೇವೆ’ ಎಂದು ಸನ್ನಿ ಲಿಯೋನ್ ತಿಳಿಸಿದ್ದಾರೆ.
-ಉದಯವಾಣಿ