ಅಂತರಾಷ್ಟ್ರೀಯ

ಪೇಶಾವರದ ಸೈನಿಕ ಶಾಲೆಯ ನರಮೇಧ ಪ್ರಕರಣದ 8 ಜನ ಅಪರಾಧಿಗಳಿಗೆ ಗಲ್ಲು

Pinterest LinkedIn Tumblr

peshafಇಸ್ಲಾಮಾಬಾದ್, ಡಿ.15-ಪೇಶಾವರದ ಸೈನಿಕ ಶಾಲೆಯ ಮೇಲೆ ದಾಳಿ ನಡೆಸಿ ಮಕ್ಕಳು ಮತ್ತು ಶಿಕ್ಷಕರನ್ನು ಪೈಶಾಚಿಕವಾಗಿ ಹತ್ಯೆ ಮಾಡಿದ್ದ ಆರೋಪದಲ್ಲಿ 8 ಮಂದಿ ಉಗ್ರರನ್ನು ಪಾಕಿಸ್ತಾನ ಇಂದು ಗಲ್ಲಿಗೇರಿಸಿತು.

ಪೇಶಾವರದ ಶಾಲೆಯ ಮೇಲಿನ ದಾಳಿಯ ನಂತರ ಮರಣದಂಡನೆ ಶಿಕ್ಷೆಯ ನಿಷೇಧವನ್ನು ತೆರವುಗೊಳಿಸಿದ ಬಳಿಕ ಪಾಕಿಸ್ತಾನ ಒಟ್ಟು ಇದುವರೆಗೆ 310 ಮಂದಿಯನ್ನು ಗಲ್ಲಿಗೆ ಹಾಕಿದೆ.

ಶಾಲೆ ನರಮೇಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪ್ರಾಂತ್ಯದ ವಿವಿಧ ಕಾರಾಗೃಹಗಳಲ್ಲಿದ್ದ 8 ಮಂದಿಯನ್ನು ಇಂದು ಬೆಳಗ್ಗೆ ಮರಣ ಶಿಕ್ಷೆಗೆ ಗುರಿಪಡಿಸಲಾಯಿತು.  ಈ ಆರೋಪಿಗಳು ಅಂತಾರಾಷ್ಟ್ರೀಯ ಕ್ಷಮಾಧಾನ ಸಂಸ್ಥೆಗೆ ಸಲ್ಲಿಸಿದ್ದ ಅರ್ಜಿಗಳು ತಿರಸ್ಕೃತವಾದ ಬಳಿಕ ಗಲ್ಲು ಶಿಕ್ಷೆ ಜಾರಿ ಮಾಡಲಾಯಿತು.

Write A Comment