ಅಂತರಾಷ್ಟ್ರೀಯ

ಐಎಸ್‌ಗೆ ನೆರವು : ಎಫ್‌ಬಿಐನಿಂದ ವ್ಯಕ್ತಿ ಬಂಧನ

Pinterest LinkedIn Tumblr

isiವಾಷಿಂಗ್ಟನ್, ಡಿ.15-ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದು ಮತ್ತು ಅಮೆರಿಕದಲ್ಲಿ ದಾಳಿ ನಡೆಸಲು ಹಣ ಪಡೆಯುವುದು ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಮೇರಿಲ್ಯಾಂಡ್ ನಿವಾಸಿಯಾಗಿರುವ 30 ವರ್ಷದ ಮೊಹಮದ್ ಎಲ್ಷಿನಾವಿ ಎಂಬುವವನನ್ನು ಉಗ್ರರಿಗೆ ಸಹಾಯ ಮಾಡಿ ಹಣ ಪಡೆಯುತ್ತಿದ್ದನೆಂದು ಎಫ್‌ಬಿಐ ಪೊಲೀಸರು ಬಂಧಿಸಿದ್ದಾರೆ.

ಅಮೆರಿಕದ ವಿವಿಧೆಡೆ ದಾಳಿಗಳನ್ನು ನಡೆಸಲು ಐಎಸ್ ಉಗ್ರರಿಗೆ ಮೊಹಮದ್ ಎಲ್ಷಿನಾವಿ ಅಗತ್ಯ ಮಾಹಿತಿಗಳು, ವಸ್ತುಗಳನ್ನು ಪೂರೈಸುತ್ತಿದ್ದ. ಇದಕ್ಕೆ ಪ್ರತಿಯಾಗಿ ಉಗ್ರರಿಂದ ಹಣ ಪಡೆಯುತ್ತಿದ್ದ ಎಂದು ಸಹಾಯಕ ಅಟಾರ್ನಿ ಜನರಲ್ (ಎಎಜಿ) ಜಾನ್ ಕಾರ್ಲಿನ್ ತಿಳಿಸಿದ್ದಾರೆ. ಬಂಧಿಸಿ ತನಿಖೆಗೆ ಒಳಪಡಿಸಿದಾಗ ತಾನು ಈ ರೀತಿ ಕಾರ್ಯ ನಿರ್ವಹಿಸುತ್ತಿದ್ದುದಾಗಿ ಮೊಹಮದ್ ಒಪ್ಪಿಕೊಂಡಿದ್ದಾನೆ.

Write A Comment