ಮನೋರಂಜನೆ

ಐಸಿಸಿ ಆಲ್‌ರೌಂಡರ್ ರ್ಯಾಂಕಿಂಗ್: ಟಾಪ್-5ರಲ್ಲಿ ಅಶ್ವಿನ್, ಜಡೇಜ

Pinterest LinkedIn Tumblr

ashwin-jadeja

ದುಬೈ: ಐಸಿಸಿ ಮಂಗಳವಾರ ಪ್ರಕಟಿಸಿರುವ ಟೆಸ್ಟ್ ರ್ಯಾಂಕಿಂಗ್‌ನ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದರೆ, ರವೀಂದ್ರ ಜಡೇಜ ಐದನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

ಅಗ್ರ-10 ದಾಂಡಿಗರ ರ್ಯಾಂಕಿಂಗ್‌ನಲ್ಲಿ ಭಾರತದ ಯಾವೊಬ್ಬ ಆಟಗಾರನೂ ಸ್ಥಾನ ಪಡೆದಿಲ್ಲ. ಅಶ್ವಿನ್(2ನೆ) ಹಾಗೂ ಜಡೇಜ(8ನೆ ಸ್ಥಾನ) ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.

ನ್ಯೂಝಿಲೆಂಡ್‌ನ ಅಗ್ರ ಕ್ರಮಾಂಕದ ದಾಂಡಿಗ ಕೇನ್ ವಿಲಿಯಮ್ಸನ್ ಟೆಸ್ಟ್ ದಾಂಡಿಗರ ರ್ಯಾಂಕಿಂಗ್‌ನಲ್ಲಿ 3ನೆ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದು, ನಂ.1 ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕದ ಎಬಿ ಡಿವಿಲಿಯರ್ಸ್‌ಗಿಂತ ಕೇವಲ ಮೂರು ಅಂಕ ಹಿಂದಿದ್ದಾರೆ.

ವಿಲಿಯಮ್ಸನ್ ಶ್ರೀಲಂಕಾ ವಿರುದ್ಧ ಸೋಮವಾರ ಕೊನೆಗೊಂಡಿರುವ ಪ್ರಥಮ ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ 88 ಹಾಗೂ 71 ರನ್ ಗಳಿಸಿದ ಹಿನ್ನೆಲೆಯಲ್ಲಿ ನ್ಯೂಝಿಲೆಂಡ್ ಸ್ವದೇಶದಲ್ಲಿ ಗೆಲುವಿನ ಸಂಖ್ಯೆಯನ್ನು 12ಕ್ಕೆ ವಿಸ್ತರಿಸಿಕೊಂಡಿದೆ.

ವಿಲಿಯಮ್ಸನ್ ಸಹ ಆಟಗಾರ ಮಾರ್ಟಿನ್ ಗಪ್ಟಿಲ್ ಲಂಕೆಯ ವಿರುದ್ಧ 156 ಹಾಗೂ 46 ರನ್ ಗಳಿಸಿರುವ ಕಾರಣ 18 ಸ್ಥಾನ ಮೇಲಕ್ಕೇರಿದ್ದಾರೆ. ಕಿವೀಸ್ ನಾಯಕ ಬ್ರೆಂಡನ್ ಮೆಕಲಮ್ 17ನೆ ಸ್ಥಾನದಲ್ಲಿ ಹಾಗೂ ಲಂಕಾದ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಏಳನೆ ರ್ಯಾಂಕಿನಲ್ಲಿದ್ದಾರೆ.

ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ಮೂರು ಸ್ಥಾನ ಭಡ್ತಿ ಪಡೆದು ನಾಲ್ಕನೆ ಸ್ಥಾನಕ್ಕೆ ತಲುಪಿದ್ದಾರೆ. ವಿಂಡೀಸ್ ವಿರುದ್ಧದ ಹೊಬರ್ಟ್ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ್ದ ಆಡಮ್ ವೋಗ್ಸ್ 19 ಸ್ಥಾನ ಭಡ್ತಿ ಪಡೆದು 15ನೆ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯದ ವಿರುದ್ಧ ಶತಕ ಸಿಡಿಸಿದ್ದ ವಿಂಡೀಸ್‌ನ ಡರೆನ್ ಬ್ರಾವೊ 25ನೆ ಸ್ಥಾನಕ್ಕೇರಿದ್ದಾರೆ.

Write A Comment