ಕನ್ನಡ ವಾರ್ತೆಗಳು

ನಾಪತ್ತೆಯಾಗಿದ್ದಾರೆ ಉಡುಪಿಯ ಪೊಲೀಸ್ ಸಿಬ್ಬಂದಿ..

Pinterest LinkedIn Tumblr

ಉಡುಪಿ: ಉಡುಪಿಯ ಪೊಲೀಸ್ ಸಿಬ್ಬಂದಿಯೋರ್ವರು ಮೂರ್ನಾಲ್ಕು ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿ ಶಿವಳ್ಳಿ ಗ್ರಾಮದ ದೊಡ್ಡಣಗುಡ್ಡೆ ಪೊಲೀಸ್‌ ಕ್ವಾರ್ಟಸ್‌ ನಿವಾಸಿ ಶ್ರೀಧರ್‌ ಜಿ. (43) ಎಂಬುವವರು ಕಾಣೆಯಾದ ಪೊಲೀಸ್ ಸಿಬ್ಬಂದಿ.

Udp_police_Missing

ಶ್ರೀಧರ್ ಅವರು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಡಿ.10 ರಂದು ಮಧ್ಯಾಹ್ನ 3:45 ಗಂಟೆಯಲ್ಲಿ ಪತ್ನಿ ಜೊತೆಗೆ ಮನೆಯಲ್ಲಿದ್ದು ಬಳಿಕ ಪತ್ನಿ ಕೆಲಸ ಬಗ್ಗೆ ತೆರಳಿದ್ದು ಡಿ.11 ರಂದು ಬೆಳಗ್ಗೆ 08:30 ಗಂಟೆಗೆ ಮನೆಗೆ ಬಂದಾಗ ಪತಿ ಶ್ರೀಧರ್‌ ಅವರು ಮನೆಯಲ್ಲಿರದೇ ಇದ್ದು, ಈ ಬಗ್ಗೆ ವಿಚಾರಿಸಿದಾಗ ಕರ್ತವ್ಯಕ್ಕೂ ತೆರಳಲಿಲ್ಲ ಎಂಬುದು ತಿಳಿದಿದೆ. ಶ್ರೀಧರ ಅವರ ಮೊಬೈಲ್‌ ನಂಬ್ರಕ್ಕೆ ಕರೆ ಮಾಡಿದಾಗ FORWARD ಮಾಡಲಾಗಿದ್ದು ಹಾಗೂ ಸಹದ್ಯೋಗಿ ಸಿಬ್ಬಂದಿಯವರಲ್ಲಿ ವಿಚಾರಿಸಿದರೂ ಸುಳಿವು ಲಭ್ಯವಾಗಿಲ್ಲ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Write A Comment