ಮನೋರಂಜನೆ

ಧೋನಿ ಜೀವನ ಕಥೆ ಆಧರಿತ ಸಿನಿಮಾ ನಿರ್ಮಾಣ

Pinterest LinkedIn Tumblr

dhoni

ಹೊಸದಿಲ್ಲಿ: ಭಾರತದ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನಕಥೆಯನ್ನು ಆಧರಿಸಿ ‘ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ ಹೆಸರಿನ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಿನಿಮಾ ಸೆಟ್‌ಗೆ ಧೋನಿ ಭೇಟಿ ನೀಡಿದರು.

ಚಿತ್ರದಲ್ಲಿ ಹಿರಿಯ ಬಾಲಿವುಡ್ ನಟ ಅನುಪಮ್ ಖೇರ್ ಧೋನಿ ಅವರ ತಂದೆ ಪಾನ್ ಸಿಂಗ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಸಿನಿಮಾ ಸೆಟ್‌ಗೆ ಭೇಟಿ ನೀಡಿರುವ ಧೋನಿ ತನ್ನ ಪಾತ್ರವನ್ನು ನಿರ್ವಹಿಸುತ್ತಿರುವ ನಟ ಸುಶಾಂತ್ ಸಿಂಗ್ ರಾಥೋರ್ ಅವರೊಂದಿಗೆ ಫೋಟೊ ತೆಗೆದು ಟ್ವಿಟರ್‌ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ.

‘‘ನಮ್ಮ ಚಿತ್ರದ ಕ್ಯಾಮರಾಮೆನ್ ಲಾರಾ ಅವರು ಎಂಎಸ್ ಧೋನಿ ಅವರನ್ನು ಚಿತ್ರೀಕರಣ ಘಟಕದಲ್ಲಿ ಭೇಟಿಯಾಗಿ ಸಂಭ್ರಮಪಟ್ಟರು. ಧೋನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸುಶಾಂತ್ ಸಿಂಗ್ ಠಾಕೂರ್ ಕೂಡಾ ತುಂಬಾ ಸಂತೋಷಪಟ್ಟಿದ್ದಾರೆ’’ ಎಂದು ಅನುಪಮ್ ಖೇರ್ ಟ್ವೀಟ್ ಮಾಡಿದರು.

ಮುಂದಿನ ವರ್ಷ ಸಿನಿಮಾ ಮಂದಿರಗಳಿಗೆ ಲಗ್ಗೆ ಇಡಲಿರುವ ‘ಎಂಎಸ್ ಧೋನಿ‘ ದಿ ಅನ್‌ಟೋಲ್ಡ್ ಸ್ಟೋರಿ’’ ಚಿತ್ರವನ್ನು ನೀರಜ್ ಪಾಂಡೆ ನಿರ್ದೇಶಿಸುತ್ತಿದ್ದಾರೆ.

Write A Comment