ಅಂತರಾಷ್ಟ್ರೀಯ

ಉಗ್ರರ ಬೆದರಿಕೆ ವದಂತಿ ಹಿನ್ನೆಲೆಯಲ್ಲಿ 600 ಪಬ್ಲಿಕ್ ಶಾಲೆಗಳು ಬಂದ್

Pinterest LinkedIn Tumblr

losಲಾಸ್ ಏಂಜಲೀಸ್, ಡಿ.16-ಉಗ್ರರ ಬೆದರಿಕೆ ವದಂತಿ ಹಿನ್ನೆಲೆಯಲ್ಲಿ ಅಮೆರಿಕದ ಲಾಸ್ ಏಂಜಲೀಸ್ ನಗರದ 600 ಪಬ್ಲಿಕ್ ಶಾಲೆಗಳನ್ನು ಬಂದ್ ಮಾಡಿ ರಜೆ ಘೋಷಿಸಿದ ಘಟನೆ ನಡೆದಿದೆ.

ತಕ್ಷಣ ಕಾರ್ಯಪ್ರವೃತರಾದ ಪೊಲೀಸರು ತನಿಖೆ ಕೈಗೊಂಡು ಇದೊಂದು ಹುಸಿ ಬೆದರಿಕೆ ವದಂತಿ ಎಂದು ಖಚಿತಪಡಿಸಿದಾಗ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಶಾಲಾ ಸಮೂಹದ ಅಂತರ್ಜಾಲದಲ್ಲಿ ಉಗ್ರರು ಬೆದರಿಕೆ ಹಾಕಿದ್ದಾರೆ ಎಂಬ ವದಂತಿ ಹರಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ  ಪೊಲೀಸರು ತಕ್ಷಣ ಮಕ್ಕಳನ್ನು ಶಾಲೆಗೆ ಬರದಂತೆ ತಿಳಿಸಿದ್ದರು.

ತೀವ್ರ ತನಿಖೆಗೊಳಪಡಿಸಿದಾಗ ಇದು ಹುಸಿ ಬೆದರಿಕೆ ಕರೆ ಎಂದು ಕಂಡುಬಂತು. ಘಟನೆಯಿಂದಾಗಿ ಸುಮಾರು 6.5 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆ ತಪ್ಪಿಸಿಕೊಳ್ಳಬೇಕಾಯಿತು.

ಈ ನಡುವೆ ಫ್ರಾನ್ಸ್‌ನ ನ್ಯೂಯಾರ್ಕ್ ನಗರದಲ್ಲೂ ಇದೇ ರೀತಿಯ ವದಂತಿ ಕೂಡ ಹರಡಿತ್ತು. ಅಲ್ಲೂ ಕೂಡ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ಅಧಿಕಾರಿಗಳು ಇದು ಉಗ್ರರ ಕೃತ್ಯವಿರಬಹುದೆಂದು ಅತಿಯಾಗಿ ವರ್ತಿಸಿದರು. ಆದರೆ ಅದು ಸುಳ್ಳು ಎಂದು ಸಾಬೀತಾಗಿತ್ತು.  ಇದಕ್ಕೆ ನ್ಯೂಯಾರ್ಕ್ ಕಮಿಷನರ್ ವಿಲಿಯಂ ಬ್ರಟಾನ್ ಅಧಿಕಾರಿಗಳ ವರ್ತನೆ ಸರಿಯಾದುದಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Write A Comment