ಕರ್ನಾಟಕ

ಹೊಸ ಕಂಪೆನಿಗಳು ಮತ್ತು ಉದ್ಯಮಗಳ ಆರಂಭಕ್ಕೆ ಬೆಂಗಳೂರೇ ಬೆಸ್ಟ್ : ಸಿದ್ದರಾಮಯ್ಯ

Pinterest LinkedIn Tumblr

sidduಬೆಂಗಳೂರು, ಡಿ.16- ಹೊಸ ಕಂಪೆನಿಗಳು ಮತ್ತು ಉದ್ಯಮಗಳ ಆರಂಭಕ್ಕೆ ಸೂಕ್ತ ವಾತಾವರಣ ಹೊಂದಿರುವ ವಿಶ್ವದ 20 ಮಹಾನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ಇದನ್ನು ಮುಂದಿನ ದಿನಗಳಲ್ಲೂ ಕಾಯ್ದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಾಫ್ಟ್‌ವೇರ್ ಮತ್ತು  ಸೇವೆಯ ರಾಷ್ಟ್ರೀಯ ಸಂಸ್ಥೆ ಸಹಯೋಗದಲ್ಲಿ ನಗರದಲ್ಲಿಂದು ಆರಂಭಿಸಲಾಗುತ್ತಿರುವ ಎರಡನೆ ಸ್ಟಾರ್ಟ್ ಅಪ್ ವೇರ್ ಹೌಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಂಗಳೂರು ಐಟಿ-ಬಿಟಿ ರಾಜಧಾನಿ ಎಂಬ ಹೆಗ್ಗಳಿಕೆ ಜತೆಗೆ ಸ್ಟಾರ್ಟ್ ಅಪ್‌ಗಳಿಗೂ ಉತ್ತಮ ವಾತಾವರಣ ಹೊಂದಿದೆ ಎಂದರು. 2015ರಲ್ಲಿ ಜಾಗತಿಕ ಸ್ಟಾರ್ಟ್ ಅಪ್ ಎಕೊ ಸಿಸ್ಟಮ್ ರ್ಯಾಂ ಕಿಂಗ್ ವರದಿಯಲ್ಲಿ ಬೆಂಗಳೂರು ಪ್ರಮುಖ 20 ನಗರಗಳಲ್ಲಿ ಮುಂಚೂಣಿಯಲ್ಲಿದೆ.

ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ 30 ಸ್ಟಾರ್ಟ್ ಅಪ್ ಹಬ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳ ಲಾಗುವುದು ಎಂದು ಹೇಳಿದರು.

ಎಲೆಕ್ಟ್ರಾನಿಕ್, ಶಿಕ್ಷಣ, ಇಂಧನ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹೊಸ ಉದ್ದಿಮೆಗಳ ಆರಂಭಕ್ಕೆ ವಿಫುಲ ಅವಕಾಶವಿದೆ. ಇದಕ್ಕಾಗಿ ಸರ್ಕಾರ ಹೊಸ ನೀತಿಯನ್ನೇ ಆರಂಭಿಸಿದೆ. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶ
ಸ್ಮಾರ್ಟ್ ಸಿಟಿ, ಸ್ಮಾರ್ಟ್ ಬ್ರಿಡ್ಜ್, ಸ್ಮಾರ್ಟ್ ಹೌಸ್, ಸ್ಮಾರ್ಟ್ ಸ್ಟ್ರೀಟ್ ಮತ್ತು ಡಿಜಿಟಲ್ ಯೋಜನೆಗಳು ಹೊಸ ಉದ್ದಿಮೆಗಳ ಆರಂಭದ ಅವಕಾಶಗಳನ್ನು ಹೆಚ್ಚಿಸಿವೆ. ದೇಶದಲ್ಲಿ 900 ಮಿಲಿಯನ್ ಮೊಬೈಲ್ ಫೋನ್‌ಗಳಿದ್ದು, 350 ಮಿಲಿಯನ್‌ಗೂ ಹೆಚ್ಚು ಇಂಟರ್‌ನೆಟ್ ಸಂಪರ್ಕಗಳಿವೆ. ಇವು ಕೈಗಾರಿಕಾ ಮತ್ತು ಸೇವಾ ಸಂಸ್ಥೆಗಳ ಆರಂಭಿಕ ಅವಕಾಶಗಳನ್ನು ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಿಸಿವೆ.

ಸಾಫ್ಟ್‌ವೇರ್ ಮತ್ತು ಸೇವೆಯ ರಾಷ್ಟ್ರೀಯ ಸಂಸ್ಥೆ ರಾಜ್ಯದಲ್ಲಿ ನ್ಯಾಸ್‌ಕಾಮ್, ಬೆಂಗಳೂರಿನಲ್ಲಿ ಈಗಾಗಲೇ ಒಂದು ವೇರ್‌ಹೌಸ್‌ಅನ್ನು ಸ್ಥಾಪಿಸಿ ಅದು ಯಶಸ್ವಿಯಾಗಿರುವುದರಿಂದ ಎರಡನೆ ಹಂತದ ವೇರ್‌ಹೌಸ್ ಸ್ಥಾಪಿಸಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ 36 ಸಾವಿರ ಚದರಡಿ ಜಾಗವನ್ನು ನೀಡಿದೆ. ಇದರಲ್ಲಿ 64 ಸ್ಮಾರ್ಟ್‌ಅಪ್ ಕಂಪೆನಿಗಳು ಸೇರಿಕೊಂಡಿವೆ. 16 ಕಂಪೆನಿಗಳು 600ಕ್ಕೂ ಹೆಚ್ಚು ಕೋಟಿ ಬಂಡವಾಳ ಹೂಡುವ ಸಾಧ್ಯತೆಯಿದೆ. ಮುಂದೆ 400ಕ್ಕೂ ಹೆಚ್ಚು ಕಂಪೆನಿಗಳು ಬರುವ ನಿರೀಕ್ಷೆಯಿದೆ. ಹೊಸದಾಗಿ ಆರಂಭಗೊಂಡಿರುವ ವೇರ್‌ಹೌಸ್‌ನಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್ ಸೇವೆಗೆ ಸಂಬಂಧಿಸಿದ ಪ್ರಯೋಗಾಲಯಗಳು ಆರಂಭಗೊಂಡಿವೆ ಎಂದು ಸಿದ್ದು ತಿಳಿಸಿದರು.

ಬೆಂಗಳೂರು ನಗರದಲ್ಲಿ ಕೆ.ಜೆ.ಜಾರ್ಜ್, ಶಾಸಕ ರಘು, ನ್ಯಾಸ್‌ಕಾಮ್ ಅಧ್ಯಕ್ಷ  ಚಂದ್ರಶೇಖರ್, ಐಟಿ-ಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುಳಾ ಮತ್ತಿತರರು ಭಾಗವಹಿಸಿದ್ದರು.  ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಚೇರಿ ಮೇಲೆ ಸಿಬಿಐ ದಾಳಿ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಗಳ ಅಧಿಕಾರಗಳನ್ನು ಹತ್ತಿಕ್ಕುವಂತಹ ಯಾವುದೇ ನಡವಳಿಕೆಗಳನ್ನು ನಾನು ಬೆಂಬಲಿಸುವುದಿಲ್ಲ ಎಂದರು.

ಕೇಂದ್ರ ಸರ್ಕಾರ ಅನ್ಯ ಪಕ್ಷಗಳ ಮುಖ್ಯಮಂತ್ರಿಗಳನ್ನು ಗುರಿಯಾಗಿಸಿಕೊಂಡು ಸಿಬಿಐ ದಾಳಿ ನಡೆಸುತ್ತಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಅರವಿಂದ್ ಕೇಜ್ರಿವಾಲ್ ಮಾಡಿರುವ ಆರೋಪಗಳಿಗೆ ನಮ್ಮ ಸಹಮತ ಇಲ್ಲ ಎಂದರು.  ಕಾಂಗ್ರೆಸ್ ಮುಖಂಡ ಪಿ.ರಮೇಶ್  ಮನೆ ಮೇಲೆ ಆದಾಯ ತೆರಿಗೆ ದಾಳಿಯಾಗಿರಬಹುದು. ಅವರು ನಮ್ಮ ಪಕ್ಷದವರು ಮಾತ್ರ. ನನಗೆ ಕಾಂಗ್ರೆಸ್‌ನ ಎಲ್ಲರೂ ಆತ್ಮೀಯರಾಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Write A Comment