ಕರ್ನಾಟಕ

ಹೊಸ ವರ್ಷದಿಂದ ಜೆಡಿಎಸ್ ಗೆ ಹೊಸಲುಕ್ : ವಿಶಿಷ್ಟ ರೀತಿಯಲ್ಲಿ ಪಕ್ಷ ಸಂಘಟನೆಗೆ ಪ್ರಯತ್ನ

Pinterest LinkedIn Tumblr

kumarಬೆಂಗಳೂರು, ಡಿ.16-ಹಳೇ ಭಿನ್ನಾಭಿಪ್ರಾಯ ಮರೆತು ಹೊಸ ವರ್ಷದಿಂದ  ವಿಶಿಷ್ಟ ರೀತಿಯಲ್ಲಿ ಪಕ್ಷ ಸಂಘಟನೆ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.  ತಮ್ಮ 57ನೇ ವರ್ಷದ ಹುಟ್ಟು ಹಬ್ಬ ಆಚರಣೆ ಸಂದರ್ಭದಲ್ಲಿ  ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನಲ್ಲಿ ಭಿನ್ನಾಭಿಪ್ರಾಯ ಇದ್ದದ್ದು ನಿಜ. ಇನ್ನು ಮುಂದೆ ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುವ ಪ್ರಯತ್ನ ಮಾಡಲಾಗುವುದು. ಮುಖಂಡರು ಸೇರಿದಂತೆ ಎಲ್ಲರನ್ನು ಒಗ್ಗಟ್ಟಿನಿಂದ ಕರೆದುಕೊಂಡು ಹೋಗುವ ಮೂಲಕ ಪಕ್ಷದ  ಸಂಘಟನೆ ಮಾಡಲಾಗುವುದು ಎಂದರು.

ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷವನ್ನು ಸಂಘಟಿಸಲಾಗುವುದು.

ಇನ್ನು ಮುಂದೆ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದ ಅವರು, ರಾಜ್ಯದಲ್ಲಿ ಬರ, ನೆರೆ, ಬೆಳೆ ಹಾನಿ ಹಾಗೂ ಸಾಲದ ಬಾಧೆ ಸೇರಿದಂತೆ ನಾನಾ ಕಾರಣಗಳಿಂದ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವುದು ನಮ್ಮ  ಜವಾಬ್ದಾರಿ.

ಈ ನಿಟ್ಟಿನಲ್ಲಿ ಜನಪರ ಸರ್ಕಾರ ಅಧಿಕಾರಕ್ಕೆ ತರಲು ಯತ್ನ ಮಾಡುತ್ತೇವೆ. ರೈತರ ಸಂಕಷ್ಟ ದೂರ ಮಾಡುವ ಜವಾಬ್ದಾರಿಯುತ ಸರ್ಕಾರ ತರಬೇಕಾಗಿತ್ತು. ಈ ದಿಸೆಯಲ್ಲಿ ನಮ್ಮ ಪಕ್ಷ ಸಕಲ ರೀತಿಯಲ್ಲೂ ಪ್ರಯತ್ನ ಮಾಡಲಿದೆ ಎಂದು ಹೇಳಿದರು.  ತಮ ಪುತ್ರ ನಿಖಿಲ್‌ಕುಮಾರಸ್ವಾಮಿ ಸಿನಿಮಾ ಮುಹೂರ್ತವೇ ತಮ್ಮ ಹುಟ್ಟಹಬ್ಬದ ವಿಶೇಷ. ಮಗ ಒಳ್ಳೆಯ ಗುರಿಯತ್ತ ಸಾಗುತ್ತಿರುವುದು ತಮಗೆ ಖುಷಿ ತಂದಿದೆ. ಮಗ ಒಳ್ಳೆ ದಾರಿಯಲ್ಲಿ ನಡೆದರೆ ಯಾವುದೇ ತಂದೆ-ತಾಯಿಯರಿಗೆ ಸಂತೋಷವಾಗುತ್ತದೆ. ಅದೇ ರೀತಿ ನಮಗೂ ಸಂತೋಷವಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

ಶ್ರೀಗಳ ಆಶೀರ್ವಾದ:
ವಿಜಯನಗರದಲ್ಲಿ ಆದಿ ಚುಂಚನಗಿರಿ ಶಾಖಾ ಮಠದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದವನ್ನು ಕುಮಾರಸ್ವಾಮಿ ಪಡೆದರು. ನಿನ್ನೆ ರಾತ್ರಿಯೇ ಕುಮಾರಸ್ವಾಮಿ ಅವರ 57ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಂಭ್ರಮದಿಂದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಚರಿಸಿದರು.

ಇಂದು ಬೆಳಗ್ಗೆ ಯುಬಿ ಸಿಟಿಯಲ್ಲಿರುವ ತಮ್ಮ ನಿವಾಸದಲ್ಲಿ ಕುಟುಂಬದ ಸದಸ್ಯರು, ಹಿತೈಷಿಗಳು ಹಾಗೂ ಅಭಿಮಾನಿಗಳೊಂದಿಗೆ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಿಸಿಕೊಂಡರು. ಬಳಿಕ ಆದಿಚುಂಚನಗಿರಿ ಶ್ರೀಗಳ ಆರ್ಶೀವಾದ ಪಡೆದು ಬಸವನಗುಡಿಯ ದೊಡ್ಡ ಗಣಪತಿ ದೇವಾಲಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಜೆಪಿನಗರದ ತಮ್ಮ ನಿವಾಸದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಕೇಕ್ ಕತ್ತರಿಸುವ ಮೂಲಕ ಸಂಭ್ರದ ಹುಟ್ಟುಹಬ್ಬ ಆಚರಿಸಿಕೊಂಡರು. ರಾಮನಗರದ ಶ್ರೀ ಚಾಮುಂಡೇಶ್ವರಿ ದೇವಿಗೂ ವಿಶೇಷ ಪೂಜೆ ಸಲ್ಲಿಸಿದರು. ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಇಂದು ಬೆಳಗ್ಗಿನಿಂದಲೇ ಪುಷ್ಪಗುಚ್ಚ ನೀಡಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.

Write A Comment