ರಾಷ್ಟ್ರೀಯ

ಅಸ್ಸಾಂ ದೇವಾಲಯಕ್ಕೆ ರಾಹುಲ್ ಹೋಗದಿದ್ದಕ್ಕೆ ಇಲ್ಲಿದೆ ನಿಜವಾದ ಕಾರಣ!

Pinterest LinkedIn Tumblr

rahul-gandhi

ನವದೆಹಲಿ: ಆರ್ ಎಸ್ ಎಸ್ ನವರು ಅಸ್ಸಾಂನ ದೇವಾಲಯಕ್ಕೆ ಹೋಗಲು ಬಿಡಲಿಲ್ಲ ಎಂದು ನಿನ್ನೆಯಷ್ಟೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಆದರೆ ರಾಹುಲ್ ಗಾಂಧಿ ದೇವಾಲಯಕ್ಕೆ ಹೋಗದ ನಿಜವಾದ ಕಾರಣವನ್ನು ಖಾಸಗಿ ಚಾನೆಲ್ ವೊಂದು ಬಹಿರಂಗ ಪಡಿಸಿದೆ.

ಅಸ್ಸಾಂನ ಬರ್ಪೆಟಾ ಸತ್ರಾ ದೇವಾಲಯಕ್ಕೆ ತೆರಳುವಾಗ ಪ್ರತಿಯೊಬ್ಬರು ಅಲ್ಲಿ ನದಿಯಲ್ಲಿ ಸ್ನಾನ ಮಾಡಿ, ನಂತರ ಧೋತಿ ಧರಿಸಿ ದೇವಾಲಯಕ್ಕೆ ಪ್ರವೇಶಿಸಬೇಕು. ಆದರೆ ಧೋತಿ ಧರಿಸಲು ರಾಹುಲ್ ಗಾಂಧಿಗೆ ಇಷ್ಟವಿರಲಿಲ್ಲ, ದೇವಾಲಯದ ನೀತಿ ನಿಯಮಗಳನ್ನು ಉಲ್ಲಂಘಿಸಲು ಇಷ್ಟವಿಲ್ಲದ ಕಾರಣ ದೇವಾಲಯಕ್ಕೆ ತೆರಳದೆ ವಾಪಸ್ ಬಂದಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಸತ್ಯ ಮುಚ್ಚಿಟ್ಟ ರಾಹುಲ್ ಗಾಂಧಿ ಆರ್ ಎಸ್ ಎಸ್ ಏಜೆಂಟ್ ಗಳು ದೇವಾಲಯ ಪ್ರವೇಶಕ್ಕೆ ನನ್ನನ್ನು ಬಿಡಲಿಲ್ಲ ಎಂದು ಹೇಳಿಕೆ ನೀಡಿದ್ದರು,

ರಾಹುಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಬರ್ಪೆಟ್ಟಾ ಸತ್ರಾ ದೇವಾಲಯದ ಮುಖಂಡ, ದೇವಾಲಯದಲ್ಲಿ ಯಾವುದೇ ಆರ್ ಎಸ್ ಎಸ್ ಏಜೆಂಟ್ ಗಳು ಇಲ್ಲ. ಧಾರ್ಮಿಕ ಪುಣ್ಯ ಕ್ಷೇತ್ರದಲ್ಲಿ ಭಕ್ತಾದಿಗಳು ದೇವರನ್ನು ನೋಡಲು ಬರುತ್ತಾರೆ. ಇಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.

Write A Comment