Lifestyle

ನೀವೂ ಬುದ್ಧಿಜೀವಿಗಳಾಗಬೇಕೆ..?ಇಲ್ಲಿದೆ ಸರಳ ಸೂತ್ರಗಳು

Pinterest LinkedIn Tumblr

intellectual_property_pic

1.ಬುದ್ಧಿಜೀವಿಗಳೆಂದು ಅನಿಸಿಕೊಳ್ಳಲು,ನಿಮಗೆ ತೋಚಿದ್ದನ್ನು ಬರೆಯಬೇಕು.ಅದಕ್ಕೆ ಆಧಾರಗಳು ಇರಬೇಕೆಂದೇನಿಲ್ಲ.ಯಾರಿಗಾದರೂ ನೋವುಂಟುಮಾಡಬಹುದೆಂದು ಯೋಚಿಸಬೇಕಿಲ್ಲ.ನಿರ್ದಿಷ್ಟ ಸಿದ್ಧಾಂತಗಳ ಅಗತ್ಯತೆಯಿಲ್ಲ. ಮನಸ್ಸಿಗೆ ತೋಚಿದ್ದನ್ನು ಗೀಚುತ್ತಾ ಹೋಗಿ..
2.ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಪ್ರಬಲವಾಗಿ ವಿರೋಧಿಸಿ,ಬಿ.ಜೆ.ಪಿ ಕೋಮುವಾದಿ ಪಕ್ಷವೆಂದು,ಹಿಂದುತ್ವದ ಬಗ್ಗೆ ಮಾತನಾಡುವವರನ್ನು ಚಡ್ಡಿಗಳೆಂದು ಹೀಯಾಳಿಸಿ…
3.ಹಿಂದುತ್ವದಲ್ಲಿರುವ ಆಚಾರ-ವಿಚಾರಗಳು ಮೂಢನಂಬಿಕೆಗಳೆಂದು ಹೋದಲ್ಲಿ-ಬಂದಲ್ಲಿ,ಕುಂತಲ್ಲಿ-ನಿಂತಲ್ಲಿ ಒದರಿ..
4. ಅನ್ಯಮತದ ಆಚಾರ-ವಿಚಾರಗಳ ವಿರುದ್ಧ ತುಟಿ ಬಿಚ್ಚಬೇಡಿ..ಅಲ್ಲಿನ ಆಚಾರ-ವಿಚಾರಗಳನ್ನು ವಿಮರ್ಶಿಸಲು ಹೋಗಲೇಬೇಡಿ.ಅವರೊಂದಿಗೆ ಸದಾ ಪ್ರೇಮದಿಂದ,ಸ್ನೇಹದಿಂದ ಇರಿ…
5. ಬ್ರಾಹ್ಮಣರನ್ನು ನಿಂದಿಸಿ..ಪುರೋಹಿತಶಾಹಿ ಎಂಬ ಪದ ಬಾಯಂಚಿನಲ್ಲಿರಲಿ.ಜಾತಿ ವ್ಯವಸ್ಥೆಯನ್ನು ತಂದವರು ಬ್ರಾಹ್ಮಣರೇ ಎಂದು ಹಲುಬಿ..ಆದರೆ,ಪರೋಕ್ಷವಾಗಿ ಜಾತಿಗಣತಿಗೆ,ಮೀಸಲಾತಿಗೆ ಬೆಂಬಲವನ್ನುನೀಡಿ…
6. ನಿಮಗಿಂತ ಬುದ್ಧಿವಂತರು ಎದುರಾದರೆ,ತರ್ಕಿಸಿದರೆ,ಸೋಲು ಖಚಿತವಾದರೆ ಅಲ್ಲಿಂದ ನಿಧಾನವಾಗಿ ಜಾರಿಕೊಳ್ಳಿ..
7.ನಾಲ್ಕು ಜನರೂ ಓದದ ನಿಮ್ಮ ಲೇಖನಗಳನ್ನು ಓದಿ,ಹೊಗಳಲು ಶತಮೂರ್ಖರಾಗಿರುವ ಕೆಲವೇ ಕೆಲವು ಜನರ ಪಡೆಯನ್ನು ಕಟ್ಟಿಕೊಳ್ಳಿ..
8.ಎಲ್ಲರಂತೇ ಇರಬೇಡಿ..ನಿಮ್ಮ ನಡೆ,ನುಡಿಯೆಲ್ಲವೂ ಪ್ರತ್ಯೇಕವಾಗಿಯೇ ಇರಲಿ..ಒಳ್ಳೆಯದನ್ನು ತಿರಸ್ಕರಿಸಿ..ಕೆಟ್ಟದ್ದನ್ನು ಪ್ರೋತ್ಸಾಹಿಸಿ..
9.ನಿನ್ನೆ ಹೇಳಿದ್ದನ್ನು ಇಂದು ಹೇಳಬೇಡಿ,ಇಂದು ಹೇಳಿದ್ದನ್ನು ನಾಳೆ ಪುನರುಚ್ಚರಿಸಬೇಡಿ.ಸಮಯ,ಸಂದರ್ಭಗಳಲ್ಲಿ ಕತ್ತೆಯ ಕಾಲನ್ನು ಹಿಡಿಯಲೂ ಬೇಸರಿಸಬೇಡಿ…!!
10.ಹಿಂದೂಗಳ ಪೂಜೆ,ಪುನಸ್ಕಾರ,ಸಂಸ್ಕೃತಿ ಇವುಗಳ ವಿರುದ್ಧ ಆಚಾರವಿಲ್ಲದ ನಾಲಿಗೆಯನ್ನು ಹರಿಬಿಡಿ..ಅವೈಜ್ಞಾನಿಕತೆಯೆಂದು ಪ್ರತಿಪಾದಿಸಿ..ಜನರಿಂದ ಛೀ..ಥೂ ಎಂದು ಕ್ಯಾಕರಿಸಿ ಉಗಿಸಿಕೊಳ್ಳಿ…
11.ಮುಖ್ಯವಾಗಿ ಯಾವುದೇ ಕ್ಷಣದಲ್ಲಿ ನಂಬಿದವರ “ಕೈ” ಬಿಡಬೇಡಿ.ದಿನದ ತುತ್ತನ್ನು ನೀಡುವ ಧನಿಗಳನ್ನು ಮರೆಯಬೇಡಿ.ಚಿಕನ್ ತುಂಡಿಗೆ,ಬಿರಿಯಾನಿಗೆ,೩೦-೯೦ ಎಣ್ಣೆಗೆ,ಕವರಲ್ಲಿ ಹಾಕಿ ಕೊಡುವ ಕಾಸಿಗೆ,ವ್ಯಕ್ತಿತ್ವವನ್ನೇ ಮರೆತುಬಿಡಿ..ಇಷ್ಟನ್ನು ಮಾಡಿದರೆ ನೀವೂ ಸಹ ಬುದ್ಧಿಜೀವಿಗಳಾಗಬಹುದು..ನಾಡಿನಾದ್ಯಾಂತ ಕುಖ್ಯಾತಿಯನ್ನು ಗಳಿಸಬಹುದು..!! ಇನ್ನೇಕೆ ತಡ…?ಇರುವ ಬುದ್ಧಿಯನ್ನು ಉಪಯೋಗಿಸಿ ಬುದ್ಧಿಜೀವಿಗಳಾಗಿ….!!
ಸುದ್ದಿ ಮೂಲ :Fight For Right

Write A Comment