ಮುಂಬೈ

ವಿಮಾನದ ಎಂಜಿನ್‍ಗೆ ಸಿಲುಕಿ ಸಾವು

Pinterest LinkedIn Tumblr

Air Indiaflith

ಮುಂಬೈ: ಏರ್‍ಇಂಡಿಯಾ ವಿಮಾನ ಸಿಬ್ಬಂದಿಯೊಬ್ಬರು ವಿಮಾನದ ಎಂಜಿನ್‍ಗೆ ಸಿಲುಕಿ ಸಾವನ್ನಪ್ಪಿದ ಘಟನೆ ಬುಧವಾರ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ನಡೆದಿದೆ.

ಮುಂಬೈನಿಂದ ಹೈದರಾಬಾದ್‍ಗೆ ಹೊರಟಿದ್ದ ವಿಮಾನದಲ್ಲಿ ಪಾರ್ಕಿಂಗ್ ವೇಳೆ ಈ ಘಟನೆ ನಡೆದಿದ್ದು, ಬ್ಯಾಗೇಜ್ ವಿಭಾಗದ ಟೆಕ್ನೀಷಿಯನ್ ಬ್ಯಾಗೇಜ್ ಸಂಗ್ರಹಕ್ಕೆ ತೆರಳಿದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ವಿಮಾನದ ಎಂಜಿನ್‍ನ ತೀರಾ ಸಮೀಪಕ್ಕೆ ಸಿಬ್ಬಂದಿ ತೆರಳಿದ ಕಾರಣ ಘಟನೆ ನಡೆದಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಡಿಜಿಸಿಎ ಆದೇಶಿಸಿದೆ. ಈ ಘಟನೆಯಿಂದ ಭಾರಿ ನೋವಾಗಿದೆ ಎಂದು ಏರ್‍ಇಂಡಿಯಾ ಸಿಎಂಡಿ ಅಶ್ವನಿ ಲೊಹಾನಿ ತಿಳಿಸಿದ್ದಾರೆ.

Write A Comment