ಬೆಂಗಳೂರು, ಡಿ.17-ದೃಶ್ಯ ಅಂತರ್ಜಾಲದ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಸವರಾಜ್ ಹಾರಳ್ಳಿ (22), ಬೆಂಗಳೂರಿನ ಶೇಖರ್(25), ತುಮಕೂರು ಜಿಲ್ಲೆಯ ಪಾವಗಡದ ಈಶ್ವರ್ (22) ಮತ್ತು ಧಾರವಾಡದ ಸೆಂದಿಲ್ಕುಮಾರ್ (29) ಬಂಧಿತರು. ಜೆ.ಪಿ.ನಗರ ವ್ಯಾಪ್ತಿಯಲ್ಲಿರುವ 100 ಅಡಿ ರಸ್ತೆಯ 32ರ ಕಟ್ಟಡದ 2ನೆ ಮಹಡಿಯಲ್ಲಿ ಲೊಕೆಂಟೋ ಅಪ್ಲಿಕೇಷನ್ ಮುಖಾಂತರ, ದೃಶ್ಯ ಅಂತರ್ಜಾಲದ ಮುಖಾಂತರ ಹುಡುಗಿಯ ಭಾವಚಿತ್ರ ಬಿತ್ತರಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಟ್ಟಡದ ಮೇಲೆ ದಾಳಿ ಮಾಡಿ ನಾಲ್ವರನ್ನು ಬಂಧಿಸಿ ಪಶ್ಚಿಮ ಬಂಗಾಳ ಮೂಲದ ನಾಲ್ವರು ಯುವತಿಯರನ್ನು ರಕ್ಷಿಸಿ 4 ಮೊಬೈಲ್, ಬೈಕ್ ಹಾಗೂ 11,500 ರೂ. ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಈ ಕಟ್ಟಡವನ್ನು ಬಾಡಿಗೆಗೆ ಪಡೆದು ಹೊರರಾಜ್ಯದ ಹುಡುಗಿಯರಿಗೆ ಕೆಲಸ ಆಮಿಷವೊಡ್ಡಿ ಅಲ್ಲಿಂದ ಕರೆತಂದು ಅಕ್ರಮ ಬಂಧನದಲ್ಲಿರಿಸಿ ವೇಶ್ಯಾವಾಟಿಕೆಗೆ ಪ್ರಚೋದಿಸುತ್ತಿದ್ದುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.