ಕನ್ನಡ ವಾರ್ತೆಗಳು

ಮಂಜೇಶ್ವರ ಅನಂತೇಶ್ವರ ದೇವಸ್ಥಾನದ ವಾರ್ಷಿಕ ಮಹೋತ್ಸವ.

Pinterest LinkedIn Tumblr

manjswar_sasati_photo_1

ಮಂಜೇಶ್ವರ , ಡಿ.18: ಹದಿನೆಂಟು ಪೇಟೆಯ ದೇವಳವೆಂಬ ಖ್ಯಾತಿಯ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವಗಳಲ್ಲಿ ಒಂದಾದ ಷಷ್ಠಿ ಮಹೋತ್ಸವ ಪ್ರಯುಕ್ತ ಶುಕ್ರವಾರ ಶ್ರೀ ದೇವರ ಬ್ರಹ್ಮರಥೋತ್ಸವವು ಕಾಶೀಮಠಾಧೀಶರಾದ ಶ್ರೀಮದ್ ಸುಧ್ರೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯರಾದ ಶೀಮದ್ ಸಂಯಮೀಂದ್ರ ತೀರ್ಥ ಸ್ವಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ದೇಶವಿದೇಶಗಳಿಂದ ಆಗಮಿಸಿದ ಭಗವಧ್ಬಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು.

manjswar_sasati_photo_2 manjswar_sasati_photo_3 manjswar_sasati_photo_4

ಬೆಳಗೆವಿಶೇಷ ಮಹಾಪ್ರಾರ್ಥನೆಯೊಂದಿಗೆ ವೈದಿಕ ವಿಧಿವಿಧಾನಗಳು ಜರಗಿದವು ಬಳಿಕ ದೇವರಿಗೆ ಪಂಚಾಮೃತ, ಪುಳಕಾಭಿಷೇಕ, ಕ್ಷಿರಾಭೀಷೇಕ ನಡೆದವು ಮಧ್ಯಾಹ್ನ ಮಹಾಯಜ್ಞದಲ್ಲಿ ಶ್ರೀ ದೇವರ ವಿಗ್ರಹವಿರಿಸಿ ವಿಶೇಷ ಹೋಮ ಹವನಾದಿಗಳು ನಡೆದವು.

ಶ್ರೀಗಳವರ ದಿವ್ಯ ಹಸ್ತಗಳಿಂದ ಪೂರ್ನಾಹುತಿ, ಮಹಾಮಂಗಳಾರತಿ ಬಳಿಕ ಶ್ರೀ ದೇವರನ್ನು ಸ್ವರ್ಣಲಾಲ್ಕಿಯಲ್ಲಿ ಇರಿಸಿ ಬ್ರಹ್ಮರಥಾರೋಹಣ ನಡೆಯಿತು.

ಚಿತ್ರ : ಮಂಜು ನಿರೇಶ್ವಾಲ್ಯ

Write A Comment