ರಾಷ್ಟ್ರೀಯ

40 ಸಾವಿರ ಕೋಟಿ ರೂ.ನ ರಷ್ಯಾದ ಎಸ್-400 ಕ್ಷಿಪಣಿ ಖರೀದಿಗೆ ಮುಂದಾದ ಭಾರತ

Pinterest LinkedIn Tumblr

kshipani

ನವದೆಹಲಿ, ಡಿ.18-ಸುಮಾರು 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಷ್ಯಾದ ಅತ್ಯಾಧುನಿಕ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ತಂತ್ರಜ್ಞಾನವನ್ನು ಖರೀದಿಸಲು ಭಾರತ ಮುಂದಾಗಿದೆ.

ರಷ್ಯಾದಲ್ಲಿ ನಡೆಯಲಿರುವ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾಸ್ಕೊ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ತೆರಳಲಿರುವ ಸಂದರ್ಭದಲ್ಲೇ ರಕ್ಷಣಾ ಸಚಿವಾಲಯ ಎಸ್-400 ಟ್ರಿಯಂಫ್ ವಾಯುರಕ್ಷಣಾ ಕ್ಷಿಪಣಿ ಖರೀದಿಗೆ ಅನುವು ಮಾಡಿಕೊಟ್ಟಿರುವುದು ವಿಶೇಷವಾಗಿದೆ.

ರಷ್ಯಾ ಒದಗಿಸಲಿರುವ ಈ ಕ್ಷಿಪಣಿಗಳು ಅತ್ಯಂತ ದೂರ ವ್ಯಾಪ್ತಿಯಲ್ಲಿ ನಡೆಯಬಹುದಾದ ವಾಯುದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲವು.  ಹಳೆಯ ಕ್ಷಿಪಣಿಗಳ ಬದಲಿಗೆ ರಷ್ಯಾದ ಎಸ್-400 ಟ್ರಿಯಂಫ್ ವಾಯು ರಕ್ಷಣಾ ಕ್ಷಿಪಣಿಗಳು ಸೇರ್ಪಡೆಯಾದರೆ ಭಾರತದ ವಾಯುಪಡೆಯ ಬಲ ಇನ್ನೂ ನೂರು ಪಟ್ಟು ಹೆಚ್ಚಲಿದೆ.

ಆದರೆ, ಭಾರತವು ಎಸ್-400 ಕ್ಷಿಪಣಿ ಸಗಟು ಖರೀದಿಗೆ ಮುಂದಾಗುವುದಕ್ಕೆ ಮೊದಲೇ ಚೀನಾ ಸರ್ಕಾರ ಕೂಡ ಈಗಾಗಲೇ ಇದೇ ಕ್ಷಿಪಣಿ ವ್ಯವಸ್ಥೆಯನ್ನು ಕೊಂಡುಕೊಂಡಿದೆ.

ಗುರುವಾರವಷ್ಟೇ ಸಭೆ ನಡೆಸಿದ ರಕ್ಷಣಾ ಖರೀದಿ ಮಂಡಳಿ, ರಷ್ಯಾದಿಂದ ಎಸ್-400 ಕ್ಷಿಪಣಿ ಖರೀದಿಗೆ ಅನುಮೋದನೆ ನೀಡಿದೆ. ಮಾತುಕತೆಗಳು ಆರಂಭವಾದ ಬಳಿಕ ಕೇಂದ್ರ ಸರ್ಕಾರ ಕ್ಷಿಪಣಿಗಳ ಬೆಲೆ ಬಗ್ಗೆ ಮಾತನಾಡಲಿದೆ. ರಷ್ಯಾದೊಂದಿಗೆ ಮಾತನಾಡಿ ಕೇಂದ್ರ ಸರ್ಕಾರ ವ್ಯಾಪಾರ ಕುದುರಿಸಲಿದೆ. ಒಟ್ಟಾರೆ ಕ್ಷಿಪಣಿ ಖರೀದಿ ಮೊತ್ತ 40 ಸಾವಿರ ಕೋಟಿ ರೂ. ಗಳಿಗೂ ಅಧಿಕವಾಗಿರುತ್ತದೆ ಎಂದು ರಕ್ಷಣಾ ಖಾತೆ ಮೂಲಗಳು ತಿಳಿಸಿವೆ.

Write A Comment