ಮನೋರಂಜನೆ

ಮೊದಲ ಕಾಮಿಕ್ ಕ್ರಿಕೆಟ್ ಸರಣಿಗೆ ರೋಹಿತ್ ಅಣಿ: ಹೈಪರ್ ಟೈಗರ್ಸ್ ಎಂಬ ಕತೆ, ಫೆ.1ರಿಂದ ಶುರು

Pinterest LinkedIn Tumblr

rohit-sharmafffಮುಂಬೈ: ಮೊನ್ನೆಯಷ್ಟೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಹೆಸರಿ ನಲ್ಲೊಂದು ಮೊಬೈಲ್ ಗೇಮಿಂಗ್ ಆ್ಯಪ್‍ಗೆ ಚಾಲನೆ ನೀಡಿದ್ದರು. ಇದೀಗ, ಟೀಂ ಇಂಡಿಯಾದ ಮತ್ತೊಬ್ಬ  ಆಟಗಾರ ರೋಹಿತ್ ಶರ್ಮಾ ಸರದಿ.

ಆದರೆ, ಅವರದ್ದು ಬೇರೆಯದೇ ಪ್ರಯತ್ನ. `ಹೈಪರ್ ಟೈಗರ್ಸ್’ ಎಂಬ ಹೆಸರಿನ ಕಾಮಿಕ್ ಸರಣಿಯೊಂದಕ್ಕೆ ಚಾಲನೆ ನೀಡಲು ಮುಂದಾಗಿರುವ ಅವರು, ಫೆಬ್ರವರಿ 1ರಿಂದ ಎಲ್ಲ ಮಾದರಿಯ  ಸ್ಮಾರ್ಟ್ ಫೋನ್‍ಗಳಲ್ಲಿ ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಯೂರೋಪ್ ಮೂಲದ ಐಎಸ್ ಎಂ ಕಾಮಿಕ್ಸ್ ಹಾಗೂ ಕಾರ್ನರ್ ಸ್ಟೋನ್ ಸ್ಪೋರ್ಟ್ಸ್ ಕಂಪನಿಗಳು  ಒಟ್ಟಾಗಿ ಸೇರಿ, ಭಾರತದ ಗ್ರಾಫಿಕ್ ಇಂಡಿಯಾ ಎಂಬ ಸಂಸ್ಥೆಫಿಡನೆ ಕೈಜೋಡಿಸಿ ಈ ಕಾಮಿಕ್ ಸರಣಿಯನ್ನು ಸೃಷ್ಟಿಸಲಿವೆ.

2077ರ ಭಾರತ ಬಿಂಬಿಸುವ ಕಥೆ !: ಕತೆ ನಡೆಯುವುದು 2077ರಲ್ಲಿನ ಭಾರತದಲ್ಲಿ! ಪುಟ್ಟ ಗ್ರಾಮೀಣ ಪ್ರಾಂತ್ಯವೊಂದರಲ್ಲಿ ಬೆಳೆಯುವ ಮಕ್ಕಳು ಹೈಪರ್ ಟೈಗರ್ಸ್ ಎಂಬ ಕ್ರಿಕೆಟ್ ತಂಡವನ್ನು ಕಟ್ಟಿಕೊಂಡಿರುತ್ತಾರೆ. ಅವರೆಲ್ಲರ ಗುರು ಗ್ರೀನ್ ಟೈಗರ್ಸ್. ಅತಿಮಾನುಷ ಶಕ್ತಿಗಳನ್ನು ತನ್ನಲ್ಲಿ ಹೊಂದಿರುವ ಈ ಗ್ರೀನ್ ಟೈಗರ್ಸ್ ಮಕ್ಕಳಿಗೆ ಕ್ರಿಕೆಟ್ ಗುರುವಾಗುವುದರ ಜತೆಗೆ, ಪರಿಸರ,  ವನ್ಯಜೀವಿಗಳಿಗೆ ಧಕ್ಕೆಯಾದಾಗಲೆಲ್ಲಾ ತನ್ನ ಶಕ್ತಿಗಳನ್ನು ಉಪಯೋಗಿಸಿ ಪ್ರಕೃತಿಯ ರಕ್ಷಣೆಗೆ ಮುಂದಾಗುತ್ತಾನೆ. ಈ ರಕ್ಷಣಾಕಾರ್ಯದಲ್ಲಿ ಅವನಿಗೆ, ಆತ ಬಾಲಶಿಷ್ಯರು ನೆರವಾಗುತ್ತಾರೆ. ಇದೇ  ಕಾಮಿಕ್‍ನ ಪ್ರಮುಖ ಕಥಾ ಹಂದರ. ಹಾಗಾಗಿ, ಕೇವಲ ಕ್ರಿಕೆಟ್ ಮಾತ್ರವಲ್ಲದೆ, ಪರಿಸರ ಕಾಳಜಿಯೂ ಈ ಕಾಮಿಕ್ ಸರಣಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಪ್ರಾಯೋಜಕರ ನಿರೀಕ್ಷೆಯಲ್ಲಿ: ಹೈಪರ್ ಟೈಗರ್ಸ್‍ನ ಸಂಪೂರ್ಣ ಕಾಮಿಕ್ ಸರಣಿ ಸಿದ್ಧವಾಗಿದ್ದು, ಇದರ ತಯಾರಕರು ಕಾರ್ಪೊರೇಟ್ ವಲಯದ ಬೆಂಬಲಕ್ಕೆ ಕಾದು ನಿಂತಿದ್ದಾರೆ. ವಾಣಿಜ್ಯ,  ಡಿಜಿಟಲ್ ಹಾಗೂ ಮಾರ್ಕೆಟಿಂಗ್ ಪ್ರಾಯೋಜಕತ್ವ ಇನ್ನಷ್ಟೇ ಬರಬೇಕಿದೆ.

ಗ್ರಾಫಿಕ್ ಇಂಡಿಯಾ ಸಂಸ್ಥೆಯು ಈವರೆಗೆ ಭಾರತದಲ್ಲಿ ಮಾಡಿರುವ ಎಲ್ಲಾ ಸೂಪರ್ ಹೀರೋಗಳ ಕಾಮಿಕ್ ಗಳು ನನಗೆ ಇಷ್ಟ. ಹಾಗಾಗಿ, ಹೈಪರ್ ಟೈಗರ್ಸ್‍ನತ್ತ ಒಲವು ತೋರಿದ್ದೇನೆ.
-ರೋಹಿತ್ ಶರ್ಮಾ, ಭಾರತೀಯ ಕ್ರಿಕೆಟಿಗ

Write A Comment