ಕನ್ನಡ ವಾರ್ತೆಗಳು

‘ಉಳ್ಳಾಲ ಶ್ರೀನಿವಾಸ ಮಲ್ಯರ -50 ನೇ ಸ್ಮೃತಿ ದಿವಸ’ ಆಚರಣೆ

Pinterest LinkedIn Tumblr

shrinivas_malya_divas

ಮಂಗಳೂರು,ಡಿ.19: ಕೊಂಕಣಿ ಭಾಸ ಆನಿ ಸಂಸ್ಕೃತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರ ಶಕ್ತಿನಗರ ಮಂಗಳೂರು ವತಿಯಿಂದ ಆಧುನಿಕ ಮಂಗಳೂರು ನಗರ ನಿರ್ಮಾತೃ ‘ಉಳ್ಳಾಲ ಶ್ರೀನಿವಾಸ ಮಲ್ಯ -50 ನೇ ಸ್ಮೃತಿ ದಿವಸ‘ ಆಚರಣಾ ಸಮಾರಂಭದ ಉದ್ಘಾಟನೆಯು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ಜೆಸಿಂತಾ ವಿಜಯ ಅಲ್ಫ್ರೆಡ್, ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಶ್ರೀ ಬಸ್ತಿ ವಾಮನ ಶೆಣೈ ದಿ. ಉಳ್ಲಾಲ ಶ್ರೀನಿವಾಸ ಮಲ್ಯರ ಸ್ಮರಣೆ ಮಾಡಿ ಸ್ವಾಗತಿಸಿದರು. ಬಳಿಕ ಮುಖ್ಯ ಅತಿಥಿಗಳು ಮಲ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾಡಿದ ಮಹಾನ ಕಾರ್ಯಗಳನ್ನು ನೆನಪಿಸಿದರು.

ಈ ಸಂದರ್ಭದಲ್ಲಿ ಮೇಯರ್ ಶ್ರೀಮತಿ ಜೆಸಿಂತಾ ವಿಜಯ ಅಲ್ಫ್ರೆಡ್ ಇವರು ಶಾಲೆಯಲ್ಲಿ ಕೊಂಕಣಿ ಶಿಕ್ಷಣ ಕಲಿಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಿದರು.

shrinivas_malya_divas_2 shrinivas_malya_divas_3 shrinivas_malya_divas_4 shrinivas_malya_divas_5 shrinivas_malya_divas_6 shrinivas_malya_divas_7 shrinivas_malya_divas_8 shrinivas_malya_divas_9 shrinivas_malya_divas_10 shrinivas_malya_divas_11 shrinivas_malya_divas_12 shrinivas_malya_divas_13 shrinivas_malya_divas_14 shrinivas_malya_divas_15 shrinivas_malya_divas_16 shrinivas_malya_divas_17 shrinivas_malya_divas_18 shrinivas_malya_divas_19 shrinivas_malya_divas_20 shrinivas_malya_divas_21 shrinivas_malya_divas_22 shrinivas_malya_divas_23 shrinivas_malya_divas_24 shrinivas_malya_divas_25 shrinivas_malya_divas_26

ಮಂಗಳೂರು ಆಕಾಶವಾಣಿ ಕೇಂದ್ರದ ಹಿರಿಯ ಉದ್ಘೋಷಕಿ ಶ್ರೀಮತಿ ಶಕುಂತಳಾ ಆರ್. ಕಿಣಿ ಇವರು ದಿ. ಉಳ್ಳಾಲ ಶ್ರೀನಿವಾಸ ಮಲ್ಯರ ಆದರ್ಶ ಹಾಗೂ ಅವರು ಜನತೆಗೆ ಮಾಡಿದ ಸೇವೆಗಳ ಸಂಕ್ಷಿಪ್ತ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಶಕ್ತಿನಗರ ಪದವು ಗ್ರಾಮದ ಕಾರ್ಪೊರೇಟರ ಶ್ರೀಮತಿ ಅಖಿಲಾ ಆಳ್ವ, ಹಾಗೂ ಮಾಜಿ ಕಾರ್ಪೊರೇಟರ ಶ್ರೀಮತಿ ಮಮತಾ ಶೆಣೈ, ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಶ್ರೀ ಬೊಳಂತೂರು ಪ್ರಬಾಕರ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಕಳ ಭುವನೇಂದ್ರ ಶಾಲೆ ಹಾಗೂ ಮಂಗಳೂರು ನಳಂದಾ ಆಂಗ್ಲ ಮಾಧ್ಯಮ ಶಾಳಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.

ಕಾರ್ಕಳ ಭುವನೇಂದ್ರ ಶಾಳಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶ್ರೀಮತಿ ಕಸ್ತೂರಿ ಉಷಾ ಮೋಹನ ಪೈ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಾಲೆಯಲ್ಲಿ ಕೊಂಕಣಿ ಭಾಷಾ ಶಿಕ್ಷಣ ಸಮಿತಿ ಮುಖ್ಯಸ್ಥ ಡಾ. ಕೆ. ಮೋಹನ ಪೈ ಧನ್ಯವಾದ ಸಮರ್ಪಣೆ ಮಾಡಿದರು.

Write A Comment