ಕರ್ನಾಟಕ

ಅನೂಪ್ ಭಂಡಾರಿಯನ್ನು ವಿದೇಶಗಳಲ್ಲಿ ಸಂಚರಿಸುವಂತೆ ಮಾಡಿದ ‘ರಂಗಿತರಂಗ’

Pinterest LinkedIn Tumblr

anoop

ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾದ ರಂಗಿತರಂಗ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದು ತಿಳಿದ ವಿಚಾರವೇ. ಆದರೆ ಈ ಚಿತ್ರ ಇದೀಗ 25 ವಾರಗಳನ್ನು ಪೂರೈಸಿದ್ದು, ವಿದೇಶದ ನೆಲದಲ್ಲೂ ಉತ್ತಮ ಕಲೆಕ್ಷನ್ ಮಾಡಿತ್ತು. ಸದ್ಯದ ವಿಚಾರ ಅದಲ್ಲ.

ರಂಗಿತರಂಗ ಚಿತ್ರ ಸದ್ಯ ಆಸ್ಕರ್ ರೇಸ್ ನಲ್ಲಿದ್ದು, ಅಂತಿಮ 305 ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅನೂಪ್ ವಿಶ್ವ ಸಂಚಾರಿಯಾಗುವಂತೆ ಮಾಡಿದೆ. ರಂಗಿತರಂಗ ಚಿತ್ರಕ್ಕೂ ಮುನ್ನ ನಾನು ಅಮೆರಿಕಾಗೆ ತೆರಳಿರಲಿಲ್ಲ. ಆದರೆ ರಂಗಿತರಂಗ ಚಿತ್ರದ ಖ್ಯಾತಿ ನನ್ನನ್ನು ಹಲವು ಬಾರಿ ಅಮೆರಿಕಾಗೆ ತೆರಳುವಂತೆ ಮಾಡಿತು ಎಂದು ಹೇಳಿದ್ದಾರೆ.

ಚಿತ್ರದ ಬಗ್ಗೆ ಮಾತನಾಡಿದ ಅನೂಪ್, ಚಿತ್ರಕ್ಕಾಗಿ ನಾನು ಕರ್ನಾಟಕ ಮತ್ತು ಭಾರತ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದೆ. ಸಾವಿರಾರು ಕಿಲೋ ಮೀಟರ್ ಗಳ ಪ್ರಯಾಣ ಮಾಡಿದ್ದೆ. ಮಂಗಳೂರಿನಿಂದ ತ್ರಿವೆಂಡ್ರಮ್ ಗೆ ಮೂರು ಭಾರಿ ಪ್ರಯಾಣಿಸಿದ್ದೆ. ಈ ಮಧ್ಯೆ ಮಡಿಕೇರಿ, ಸಕಲೇಶಪುರ ಹಾಗೂ ಊಟಿ ಗಳಲ್ಲಿಯೂ ಚಿತ್ರೀಕರಣ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಒಳ್ಳೆಯ ಜಾಗಗಳು ಸಿಕ್ಕಿ ಅಲ್ಲಿ ಚಿತ್ರೀಕರಣ ಮಾಡಿದ್ದರಿಂದ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ನನ್ನ ನಿರಂತರ ಪ್ರಯಾಣ ವರ್ಕ್ ಔಟ್ ಆಗಿದ್ದು, ಹೀಗಾಗಿ ಪ್ರೇಕ್ಷಕರ ಕಣ್ಣು ತಣಿಸುವಂತಾ ಲೋಕೆಷನ್ ಗಳನ್ನು ನೀಡಲು ಸಾಧ್ಯವಾಯಿತು ಎಂದರು.

ವಿಕೆ ಪ್ರಕಾಶ್ ನಿರ್ಮಾಣದ ರಂಗಿತರಂಗ ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶಿಸಿದ್ದರು. ನಿರೂಪ್ ಭಂಡಾರಿ, ಆವಂತಿಕಾ ಶೆಟ್ಟಿ, ರಾಧಿಕಾ ಚೇತನ್, ಸಾಯಿಕುಮಾರ್ ತಾರಾಗಣದಲ್ಲಿದ್ದರು. ರಂಗಿತರಂಗ ಜರ್ಮನಿ, ಕೆನಡಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ನಾರ್ವೆ, ಸಿಂಗಾಪುರ್, ಹಾಂಗ್ ಕಾಂಗ್, ಜಪಾನ್ ಸೇರಿದಂತೆ ವಿದೇಶಗಳಲ್ಲೂ ಬಿಡುಗಡೆಯಾಗಿತ್ತು.

Write A Comment