ನವದೆಹಲಿ: 2015ರಲ್ಲಿ ವಿದೇಶ ರಾಜ್ಯಗಳಲ್ಲಿರುವ ಅನಿವಾಸಿ ಭಾರತೀಯರಿಂದ ಅತೀ ಹೆಚ್ಚು ಹೂಡಿಕೆ ಪಡೆದುಕೊಂಡ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ ಎಂದು ವಿಶ್ವ ಬ್ಯಾಂಕ್ ವರದಿ ಹೇಳಿದೆ. ಈ ವರ್ಷ ಅನಿವಾಸಿ ಭಾರತೀಯರು ಭಾರತಕ್ಕೆ 72 ಬಿಲಿಯನ್ ಡಾಲರ್ (ಸರಿಸುಮಾರು 4,75,200 ಲಕ್ಷ ಕೋಟಿ) ಹಣ ಕಳುಹಿಸಿದ್ದಾರೆ.
ಅದೇ ವೇಳೆ ಈ ಪಟ್ಟಿಯಲ್ಲಿ ಚೀನಾ (64 ಬಿಲಿಯನ್ ಯುಎಸ್ ಡಾಲರ್ )ಎರಡನೇ ಸ್ಥಾನದಲ್ಲಿದ್ದು, ಫಿಲಿಪಿನ್ಸ್ (30 ಬಿಲಿಯನ್ ಯುಎಸ್ ಡಾಲರ್ ) ಮೂರನೇ ಸ್ಥಾನದಲ್ಲಿದೆಯ.
ವಿವಿಧ ರಾಜ್ಯಗಳಲ್ಲಿರುವ ಅನಿವಾಸಿಗಳು 601 ಬಿಲಿಯನ್ ಡಾಲರ್ ಗಳನ್ನು ತಮ್ಮ ತಾಯ್ನಾಡಿಗೆ ಕಳಿಸಿದ್ದಾರೆ. ಇದರಲ್ಲಿ 441 ಬಿಲಿಯನ್ ಡಾಲರ್ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ದಕ್ಕಿದೆ.
ವರದಿ ಪ್ರಕಾರ ಅತೀ ಹೆಚ್ಚು ಹಣ ಕಳುಹಿಸಿಕೊಟ್ಟಿದ್ದು ಅಮೆರಿಕದಿಂದಾಗಿದೆ. ನಂತರದ ದೇಶಗಳ ಪಟ್ಟಿಯಲ್ಲಿ ಸೌದಿ ಅರೇಬಿಯಾ ಮತ್ತು ರಷ್ಯಾ ಹೆಸರಿದೆ.
ಜಗತ್ತಿನಲ್ಲಿ ಅತೀ ಹೆಚ್ಚು ಅನಿವಾಸಿಗಳು ಯು.ಎಸ್, ಸೌದಿ ಅರೇಬಿಯಾ, ಜರ್ಮನಿ , ರಷ್ಯಾ, ಯುಎಇ, ಯು.ಕೆ, ಫ್ರಾನ್ಸ್ , ಕೆನಡಾ, ಸ್ಪೈನ್, ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ.