ವಾಷಿಂಗ್ಟನ್, ಡಿ.19 ಮುಸ್ಲಿಮರು ಅಮೆರಿಕ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಹೇಳಿಕೆ ನೀಡಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಜನಪ್ರಿಯತೆ ಏರಿದ್ದು, ಒಂದು ತಿಂಗಳ ಅವಧಿಯಲ್ಲಿ 11ಪಾಯಿಂಟ್ ಗಳಿಸಿದ್ದಾರೆ. ಜನಪ್ರಿಯತೆ ಚಾರ್ಟ್ ಶೇ 39 ಕ್ಕೆ ತಲುಪಿದೆ.
69ರ ಹರೆಯದ ನ್ಯೂಯಾರ್ಕ್‌ನ ರಿಯಲ್ ಎಸ್ಟೇಟ್ ಉದ್ಯಮಿ ಡೊನಾಲ್ಡ್ ಟ್ರಂಪ್ ಅವರು ಮುಸ್ಲಿಮರಿಗೆ ಅಮೆರಿಕಕ್ಕೆ ತಾತ್ಕಾಲಿಕ ಪ್ರವೇಶ ನಿಷೇಧ ಮಾಡಬೇಕೆಂದು ಹೇಳಿಕ ನೀಡಿದ ಬಳಿಕ ಅವರಿಗೆ ಶೇ11ರಷ್ಟು ಲಭವಾಗಿದೆ.
ಶೇ 34ರಷ್ಟು ರಿಪಬ್ಲಿಕನ್ ಮತದಾರರು ಟಂಪ್‌ಗೆ ಬೆಂಬಲ ನೀಡಿದ್ದಾರೆ. ಕ್ರೂಝ್ ಶೇ 18ರಷ್ಟು, ರುಬಿಯೊ ಶೇ 13 ಮತ್ತು ಜೆಬ್ ಬುಶ್ ಶೇ 7ರಷ್ಟು ಮತದಾರರ ಮನ ಗೆದ್ದಿದ್ದಾರೆ.