ರಾಷ್ಟ್ರೀಯ

ತಂತ್ರಜ್ಞಾನ ದುರ್ಬಳಕೆಯಿಂದ ಹಿಂಸೆಯತ್ತ ಯುವಜನ : ರಾಜ್‌ನಾಥ್ ಆತಂಕ

Pinterest LinkedIn Tumblr

raj

ನವದೆಹಲಿ, ಡಿ.20-ಸಾಮಾಜಿಕ ಜಾಲತಾಣ ಹಾಗೂ ಆನ್‌ಲೈನ್‌ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಇಂದಿನ ಯುವ ಜನಾಂಗ ಕೋಮುವಾದಿಗಳಾಗಿ ಪರಿವರ್ತನೆ ಯಾಗುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಗುಜರಾತ್‌ನ ಕಛ್ ಬಳಿ ಇರುವ ಭುಜ್‌ನಲ್ಲಿ ನಡೆದ ಪೊಲೀಸ್ ಡಿಜಿಪಿಗಳು ಮತ್ತು ಐಜಿಪಿಗಳ ಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ. ಈ ಕಾರಣದಿಂದಾಗಿಯೇ ಭಾರತದಲ್ಲೂ ಐಎಸ್‌ಐಎಸ್ ತಂಡಗಳು ಕಾರ್ಯಾಚರಣೆ ನಡೆಸಲು ಕಾರಣವಾಗಿದೆ ಎಂದು ರಾಜ್‌ನಾಥ್ ಕಳವಳ ವ್ಯಕ್ತಪಡಿಸಿದರು.  ಪರಿಣಾಮಕಾರಿಯಾಗಿ ಐಎಸ್‌ಐಎಸ್ ಉಗ್ರ ಕೃತ್ಯಗಳನ್ನು ಪರಿಣಾಮಕಾರಿಯಾಗಿ ತಡೆಯಲಾಗುತ್ತಿಲ್ಲ.

ಕೇಂದ್ರ-ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಪರಸ್ಪರ ಸಮನ್ವಯತೆಯ ಮೂಲಕ ಉಗ್ರವಾದವನ್ನು ಹಿಮ್ಮೆಟ್ಟಿಸಬೇಕಾಗಿದೆ ಎಂದು ಸಿಂಗ್ ಹೇಳಿದ್ದಾರೆ.

ಭಾರತ ಹಾಗೂ ನೆರೆಯ ಬಾಂಗ್ಲಾ ದೇಶ ಮತ್ತು ಆಪ್ಘಾನಿ ಸ್ಥಾನಗಳನ್ನು ನೆಲೆಯಾಗಿಟ್ಟುಕೊಂಡು ಇಲ್ಲಿ ಕಾಲಿಡಲು ಐಎಸ್‌ಐಎಸ್ ಪ್ರಯತ್ನಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಭದ್ರತೆ ತೃಪ್ತಿಕರವಾಗಿದೆ ಎಂದು ಹೇಳಿದ ರಾಜ್‌ನಾಥ್ ಸಿಮಗ್, ಗಡಿ ರಕ್ಷಣೆಯಲ್ಲಿ ಸೇನಾ ಪಡೆಗಳು ಉತ್ತಮ ಸಾಧನೆ ತೋರಿಸಿವೆ ಎಂದು ಹೇಳಿದ್ದಾರೆ. ಎಂಥದೇ ಸಂದರ್ಭ ಎದುರಾದರೂ ನಿಭಾ ಯಿಸಲು ಸೇನಾ ಪಡೆಗಳು ಸಮರ್ಥವಾಗಿವೆ ಎಂದು ಅವರು ತಿಳಿಸಿದ್ದಾರೆ.

Write A Comment