ಅಂತರಾಷ್ಟ್ರೀಯ

ಬಾಂಬ್‌ನಂಥ ವಸ್ತು ಪತ್ತೆ: ತುರ್ತು ಭೂಮಿಗಿಳಿದ 473 ಮಂದಿಯಿದ್ದ ವಿಮಾನ

Pinterest LinkedIn Tumblr

vimana

ನೈರೋಬಿ, ಡಿ.20- ಮಾರಿಷಸ್‌ನಿಂದ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಹೊರಟಿದ್ದ ಏರ್‌ಫ್ರಾನ್ಸ್ ವಿಮಾನದಲ್ಲಿ ಬಾಂಬ್‌ನಂತಹ ವಸ್ತುವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನವನ್ನು ಕೀನ್ಯಾದಲ್ಲಿ ತುರ್ತಾಗಿ ಭೂಮಿಗೆ ಇಳಿಸಲಾಗಿದೆ.

ವಿಮಾನದಲ್ಲಿದ್ದ 459 ಮಂದಿ ಪ್ರಯಾಣಿಕರು, 14 ಜನ ಸಿಬ್ಬಂದಿ ಸುರಕ್ಷಿತವಾಗಿ ಕೆಳಗಿಳಿದಿದ್ದಾರೆ. ಮಾರಿಷಸ್ ಸಮಯದಂತೆ ರಾತ್ರಿ 9 ಗಂಟೆಗೆ ವಿಮಾನ ಹೊರಟಿತ್ತು. ಮೊಂಬಾಸಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ಫ್ರಾನ್ಸ್ 463 ವಿಮಾನ ಇಳಿದಾಗ ಮಧ್ಯರಾತ್ರಿ 1ಗಂಟೆಯಾಗಿತ್ತು.

ಬಾಂಬ್ ಪರಿಶೀಲನೆಗೆ ತಜ್ಞರು ಆಗಮಿಸಿದ್ದು, ತಪಾಸಣೆ ನಡೆದಿದೆ. ವಿಮಾನ ಇನ್ನೂ ಕೂಡ ಮೊಂಬಾಸಾ ನಿಲ್ದಾಣದಲ್ಲೇ ಇದೆ. ಒಟ್ಟಾರೆ ವಿಮಾನದಲ್ಲಿದ್ದವರೆಲ್ಲಾ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Write A Comment