ಕನ್ನಡ ವಾರ್ತೆಗಳು

ಪಚ್ಚನಾಡಿ ರೆಸಾರ್ಟ್‌‌ನಲ್ಲಿ ಧ್ವನಿವರ್ಧಕ ವಿವಾದ : ಆಕ್ಷೇಪ ವ್ಯಕ್ತಪಡಿಸಿದ್ದ ವ್ಯಕ್ತಿಗೆ ಗುಂಪಿನಿಂದ ಹಲ್ಲೆ – ಆರೋಪ

Pinterest LinkedIn Tumblr

speakar_home_photo

ಮಂಗಳೂರು, ಡಿ.21: ಪಚ್ಚನಾಡಿ ರೆಸಾರ್ಟ್‌ವೊಂದರ ಕಾರ್ಯಕ್ರಮದಲ್ಲಿ ಜೋರಾಗಿ ಇಟ್ಟಿದ್ದ ಧ್ವನಿವರ್ಧಕದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿರುವ ಘಟನೆ ರವಿವಾರ ನಡೆದಿದೆ.

ತಡರಾತ್ರಿ ಸುಮಾರು 1 ಗಂಟೆಗೆ ಪಚ್ಚನಾಡಿಯ 2 ಎಕರೆ ರೆಸಾರ್ಟ್‌ನಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಇಲ್ಲಿ ಅಳವಡಿಸಲಾಗಿದ್ದ ಮೈಕ್‌ನ ಧ್ವನಿ ಜೋರಾಗಿದ್ದರಿಂದ ಆಸುಪಾಸಿನ ಜನರಿಗೆ ತೊಂದರೆಯಾಗಿತ್ತು.

ಸ್ಥಳೀಯ ನಿವಾಸಿ ನವನೀತ್ ಎಂಬಾತ ಕಾರ್ಯಕ್ರಮ ನಡೆಯುತ್ತಿರುವ ಸ್ಥಳಕ್ಕೆ ತೆರಳಿ ಅಲ್ಲಿನ ಮೈಕ್ ಅಪರೇಟರ್‌ನಲ್ಲಿ ಧ್ವನಿಯನ್ನು ಕಡಿಮೆ ಮಾಡುವಂತೆ ಕೇಳಿಕೊಂಡಿದ್ದರ ಪರಿಣಾಮ ಕೋಪಗೊಂಡ ಬಿಕರ್ನಕಟ್ಟೆಯ ೀರಜ್ ಕ್ಯಾಸ್ತಲಿನೊ, ಆತನ ಸಹೋದರ ಅನೂಜ್ ಕ್ಯಾಸ್ತಲಿನೊ, ಉರ್ವಸ್ಟೋರ್‌ನ ಮೆಲ್ವಿನ್ ಕ್ಯಾಸ್ತಲಿನೊ ಎಂಬವರು ನವನೀತ್‌ಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಕಾರ್ಯಕ್ರಮದ ಗೇಟ್ ಹೊರಗಡೆ ನಿಲ್ಲಿಸಿದ್ದ ಅವರ ಬೈಕ್‌ಗೆ ಹಾನಿಯನ್ನುಂಟು ಮಾಡಿದ್ದಾರೆ ಎಂದು ನವನೀತ್ ಆರೋಪಿಸಿದ್ದಾರೆ.  ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment