ಕನ್ನಡ ವಾರ್ತೆಗಳು

ಡಿ.26 : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯಿಂದ ದಫ್ ಮತ್ತು ಮೆಹಂದಿ ಸ್ಪರ್ಧೆ

Pinterest LinkedIn Tumblr

mehadi

ಮಂಗಳೂರು,ಡಿ.21 : ಪಿಲಿಕುಳ ಹಬ್ಬದ ಅಂಗವಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಡಿ.26 ರಂದು ಪಿಲಿಕುಳ ನಿಸರ್ಗಧಾಮದಲ್ಲಿ ದಫ್ ಮತ್ತು ಮೆಹಂದಿ ಸ್ಪರ್ಧೆಯನ್ನು ಆಯೋಜಿಸಿದೆ.

ದಫ್ ಸ್ಪರ್ಧೆ: ಬ್ಯಾರಿ ಅಕಾಡೆಮಿಯು ದ.ಕ.ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಸಹಕಾರದೊಂದಿಗೆ ನಡೆಸುವ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ಬ್ಯಾರಿ ಅಕಾಡಮಿಗೆ ಮುಂಚಿತವಾಗಿ ಮಾಹಿತಿ ನೀಡಿ ಡಿ.26ರ ಅಪರಾಹ್ನ 3 ಗಂಟೆಗೆ ಪಿಲಿಕುಳದಲ್ಲಿ ಹಾಜರಿದ್ದುಕೊಂಡು ಹೆಸರು ನೋಂದಾಯಿಸಬೇಕು.

ಮೊದಲು ನೋಂದಣಿ ಮಾಡಿದ 10 ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಪ್ರತಿಯೊಂದು ತಂಡಕ್ಕೆ 7 ಪ್ಲಸ್ 1 ನಿಮಿಷಗಳನ್ನು ನೀಡಲಾಗುವುದು. ಸ್ಪಧೆಯು ಒಂದು ಸುತ್ತಿಗೆ ಸೀಮಿತವಾಗಿರಬೇಕು. ಪ್ರತೀ ತಂಡಗಳು ಕನಿಷ್ಠ 2 ಬ್ಯಾರಿ ಹಾಡುಗಳನ್ನು ಬಳಸಬೇಕು. ವಿಜೇತ ತಂಡಗಳಿಗೆ ಪ್ರಥಮ (6 ಸಾವಿರ ರೂ.), ದ್ವಿತೀಯ (4 ಸಾವಿರ ರೂ), ತೃತೀಯ (2 ಸಾವಿರ ರೂ) ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡಗಳಿಗೆ ಪ್ರಯಾಣಭತ್ಯೆ ನೀಡಲಾಗುವುದು. ಆಯೋಜಕರ ತೀರ್ಮಾನವೇ ಅಂತಿಮವಾಗಿರುತ್ತದೆ. ನೋಂದಣಿಗಾಗಿ ಮೊ.ಸಂ. 9343563717 ಅಥವಾ 9611545686 ನ್ನು ಸಂಪರ್ಕಿಸಬಹುದು.

ಮೆಹಂದಿ ಸ್ಪರ್ಧೆ: ಮೆಹಂದಿ ಸ್ಪರ್ಧೆಯಲ್ಲಿ ಬ್ಯಾರಿ ಸ್ತ್ರೀಯರು ಮಾತ್ರ ಭಾಗವಹಿಸಬಹುದಾಗಿದೆ. ವಯಸ್ಸಿನ ಪರಿಮಿತಿ ಇಲ್ಲ. ಸ್ಪರ್ಧೆಯು ಸ್ಥಳೀಯ ಮತ್ತು ಅರಬಿಕ್ ಶೈಲಿಯನ್ನು ಹೊಂದಿರುತ್ತದೆ. ಎರಡೂ ವಿಭಾಗಕ್ಕೆ ಪ್ರತ್ಯೇಕವಾಗಿ ಪ್ರಥಮ (1,500 ರೂ.) ಮತ್ತು ದ್ವಿತೀಯ (1,000 ರೂ.) ಬಹುಮಾನ ನೀಡಲಾಗುವುದು. ಸ್ಪರ್ಧಾಳುಗಳು ಮೆಹಂದಿ ಹಾಗೂ ಅದಕ್ಕೆ ಬೇಕಾದ ಪರಿಕರಗಳನ್ನು ಸ್ವತ: ತಾವೇ ತರಬೇಕು. ಅಲ್ಲದೆ ಮೆಹಂದಿಯನ್ನು ಹಚ್ಚಲು ಸ್ಪರ್ಧಾಳುಗಳು ತಮ್ಮ ಜೊತೆ ಒಬ್ಬ ಸ್ತ್ರೀಯನ್ನು ಕಡ್ಡಾಯವಾಗಿ ಕರತರಬೇಕು. (ಸ್ವತ: ತಮ್ಮ ಕೈಗೆ ಮೆಹಂದಿ ಹಚ್ಚುವಂತಿಲ್ಲ) ಸ್ಪರ್ಧೆಗೆ 45 ನಿಮಿಷಗಳ ಕಾಲಾವಕಾಶ ನೀಡಲಾಗುವುದು.

ಸ್ಪರ್ಧಾಳುಗಳು ಬ್ಯಾರಿ ಅಕಾಡಮಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಮತ್ತು ಡಿ.26ರಂದು ಅಪರಾಹ್ನ 3 ಗಂಟೆಗೆ ಪಿಲಿಕುಳದಲ್ಲಿ ಹಾಜರಿದ್ದುಕೊಂಡು ಹೆಸರು ನೋಂದಾಯಿಸಬೇಕು. ಆಯೋಜಕರ ತೀರ್ಮಾನವೇ ಅಂತಿಮವಾಗಿರುತ್ತದೆ. ನೋಂದಣಿಗಾಗಿ ಮೊ.ಸಂ. 9343563717 / 9481017495 ನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು/ ರಿಜಿಸ್ಟ್ರಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಪ್ರಿಸಿಡಿಯಂ ಕಮರ್ಷಿಯಲ್ ಕಾಂಪ್ಲೆಕ್ಸ್, ಅತ್ತಾವರ ನಂದಿಗುಡ್ಡ ರಸ್ತೆ, ಮಂಗಳೂರು575001 ಸಂಪರ್ಕಿಸಬಹುದು ಎಂದು ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್  ತಿಳಿಸಿದ್ದಾರೆ.

Write A Comment