ರಾಷ್ಟ್ರೀಯ

ಮಾರ್ಚ್‌ನಿಂದ ಬಿಹಾರದಲ್ಲಿ ಮದ್ಯ ನಿಷೇಧ : ಮದ್ಯದಂಗಡಿಯಲ್ಲಿ ಹಾಲು ಮಾರಾಟ

Pinterest LinkedIn Tumblr

Nitish-Kumar

ಪಾಟ್ನಾ,ಡಿ.21: ಮುಂದಿನ ಮಾರ್ಚ್‌ ತಿಂಗಳಿನಿಂದ ಬಿಹಾರದಲ್ಲಿ ಎಲ್ಲ ರೀತಿಯ ಮದ್ಯವನ್ನು ನಿಷೇಧ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಈ ವೃತ್ತಿಯನ್ನು ಅವಲಂಬಿಸಿದ ಲಕ್ಷಾಂತರ ಮಂದಿ ಮುಂದಿನ ಭವಿಷ್ಯದ ಬಗ್ಗೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಇದಕ್ಕಾಗಿ ಸರ್ಕಾರ ನೂತನ ಯೋಜನೆಯೊಂದನ್ನು ಜಾರಿ ಮಾಡಲು ಮುಂದಾಗಿದೆ. ಬಾರ್ ಮಾಲೀಕರಿಗಾಗಿ ಹಾಲಿನ ಡೇರಿಗಳನ್ನು ಪ್ರಾರಂಭಿಸಿದರೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.

ಈಗಾಗಲೇ ಇಲ್ಲಿನ ಹಾಲು ಉತ್ಪಾದನ ಸಹಕಾರ ಮಂಡಳಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿರುವ ಅವರು, ಬಾರ್ ಮಾಲೀಕರು ಹಾಗೂ ಇಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಹಾಲಿನ ಡೇರಿ ನಿರ್ವಹಣೆ ಮಾಡಲು ಕ್ರಿಯಾಯೋಜನೆ ರೂಪಿಸಬೇಕೆಂದು ಅಧಿಕಾರಿಗಳಗೆ ಸೂಚನೆ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಒಟ್ಟು 6 ಸಾವಿರಕ್ಕೂ ಅಧಿಕ ಬಾರ್ ಅಂಗಡಿಗಳಿವೆ. ಏಪ್ರಿಲ್ 1ರಿಂದ ಸ್ವದೇಶಿ, ವಿದೇಶಿ, ಎಲ್ಲ ರೀತಿಯ ಮದ್ಯದಂಗಡಿಗಳು ಬಂದ್ ಆಗಲಿವೆ. ಅಂದಾಜಿನ ಪ್ರಕಾರ ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಮದ್ಯದಂಗಡಿಗಳು ಮುಚ್ಚಿಕೊಂಡರೆ ನಾವೇನು ಮಾಡಬೇಕೆಂಬ ಚಿಂತನೆ ಬೇಡ. ಸರ್ಕಾರ ನಿಮಗೆ ಎಲ್ಲ ರೀತಿಯ ನೆರವು ನೀಡಲು ಸಿದ್ಧವಿದೆ ಎಂದು ನಿತೀಶ್ ಕುಮಾರ್ ಬಾರ್ ಮಾಲೀಕರಿಗೆ ಅಭಯಹಸ್ತ ನೀಡಿದ್ದಾರೆ.

Write A Comment