ಅಂತರಾಷ್ಟ್ರೀಯ

ಚೀನಾದಲ್ಲಿ ಭಾರೀ ಭೂಕುಸಿತ : ನೂರಕ್ಕೂ ಹೆಚ್ಚು ಮಂದಿ ಸಜೀವ ಸಮಾಧಿ

Pinterest LinkedIn Tumblr

chinaಬೀಜಿಂಗ್, ಡಿ.21-ಚೀನಾ ದಕ್ಷಿಣ ಪ್ರಾಂತ್ಯದ ಶೆಂಝೆನ್‌ನ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಅನೇಕ ಮನೆಗಳು ನೆಲಸಮವಾಗಿದ್ದು, 100ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಗ್ಸಿನ್‌ಹುವಾ ವರದಿ ತಿಳಿಸಿದೆ. ಇಂದುಮುಂಜಾನೆ ಈ ದುರಂತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆದಿದೆ. ಸುಮಾರು 60 ಸಾವಿರ ಚದರ ಮೀಟರ್ ಪ್ರದೇಶದಲ್ಲಿದ್ದ 35ಕ್ಕೂ ಹೆಚ್ಚು ಕಟ್ಟಡಗಳು ಕುಸಿದು ಬಿದ್ದಿದ್ದು, ಇಡೀ ಪ್ರದೇಶದಲ್ಲಿ ಕೆಸರಿನ ರಾಡಿ ತುಂಬಿಕೊಂಡಿದೆ.

ಕಟ್ಟಡಗಳ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿರುವವರ ರಕ್ಷಣೆಗಾಗಿ ಅಗ್ನಿಶಾಮಕ ಸಿಬ್ಬಂದಿ, ರಕ್ಷಣಾ ಪಡೆಗಳು, ಯೋಧರು, ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಎಲ್ಲೆಲ್ಲೂ ಕೆಸರು ತುಂಬಿಕೊಂಡಿರುವುದರಿಂದ ರಕ್ಷಣಾ ಕಾರ್ಯಕ್ಕೆ ತೀವ್ರ  ಅಡಚಣೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಭೂಕುಸಿತದ ಸೂಚನೆ ಲಭ್ಯವಾಗುತ್ತಿದ್ದಂತೆಯೇ 900 ಜನರನ್ನು ಸ್ಥಾಳಾಂತರಿಸಲಾಗಿದೆ. ಉಳಿದವರ ಬಗ್ಗೆ ಲೆಕ್ಕ ಸಿಕ್ಕುತ್ತಿಲ್ಲ. 1,500 ಜನ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಶೆಂಝೆನ್ ಜಿಲ್ಲಾಧಿಕಾರಿ ಲಿ ಯಕಾಂಗ್ ತಿಳಿಸಿದ್ದಾರೆ.  ಇದು ಕೈಗಾರಿಕಾ ಪ್ರದೇಶವಾದ್ದರಿಂದ ಇಲ್ಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹೆಚ್ಚಿನ ಸಂಖ್ಯೆಯ ಜನರನ್ನು ರಕ್ಷಿಸಲಾಗಿದೆ. ಹಾಗಾಗಿ ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂದು ಸಾರ್ವಜನಿಕ ಭದ್ರತಾ ವಿಭಾಗದ ಮುಖ್ಯಸ್ಥ ರೆನ್ ಜಿಗುವಾಂಗ್ ಹೇಳಿದ್ದಾರೆ.

Write A Comment