ಅಂತರಾಷ್ಟ್ರೀಯ

ಸಿರಿಯಾದಲ್ಲಿ ಸಜ್ಜಾಗಿದ್ದಾರೆ 65 ಸಾವಿರ ಜಿಹಾದಿಗಳು

Pinterest LinkedIn Tumblr

siriyaಲಂಡನ್: ಸಿರಿಯಾದಲ್ಲಿ ಕಾರ್ಯಾಚರಿಸುತ್ತಿರುವ ಐಎಸ್ ಉಗ್ರರನ್ನು ಸಂಪೂರ್ಣವಾಗಿ ಮಟ್ಟಹಾಕಿದರೆ, ಅವರ ಸ್ಥಾನದಲ್ಲಿ ಹಿಂಸಾಚಾರ ಮುಂದುವರಿಸಲು 65 ಸಾವಿರ ಜಿಹಾದಿಗಳು ಸನ್ನದ್ಧರಾಗಿರುವುದಾಗಿ ಟೋನಿ ಬ್ಲೇರ್ ಫೇತ್ ಫೌಂಡೇಶನ್ ತಿಳಿಸಿರುವುದಾಗಿ ದಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳ ರಕ್ಷಣಾ ಪಡೆಗಳು ಕೇವಲ ಐಎಸ್ ಉಗ್ರರನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸುತ್ತಿವೆ. ಆದರೆ ಇದೇ ಬಗೆಯ ಹೋರಾಟಗಳನ್ನು ನಡೆಸುತ್ತಿರುವ 15ಕ್ಕೂ ಹೆಚ್ಚು ಸಣ್ಣಪುಟ್ಟ ಭಯೋತ್ಪಾದನಾ ಸಂಘಟನೆಗಳನ್ನು ನಿರ್ಲಕ್ಷಿಸಲಾಗಿದೆ. ಇದು ಭಾರಿ ಅನಾಹುತಕ್ಕೆ ಕಾರಣವಾಗಲಿದೆ ಎಂದು ಟೋನಿ ಬ್ಲೇರ್ ಸಂಸ್ಥೆ ಹೇಳಿರುವುದಾಗಿ ವರದಿಯಲ್ಲಿ ವಿವರಿಸಲಾಗಿದೆ.

ಈ 15 ಸಂಘಟನೆಗಳ ಪೈಕಿ ಯಾವುದೇ ಸಂಘಟನೆಗೂ ತಾತ್ವಿಕ ಗುರಿ ಎಂಬುದಿಲ್ಲ. ಆದರೆ ಸಿರಿಯಾ ಯುದ್ಧದ ಬಳಿಕ ಕ್ಯಾಲಿಫೇಟ್ ರಚನೆಗೆ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಅಡ್ಡಿಯುಂಟಾಯಿತು ಎಂಬ ಕೂಗು ಸಹಜವಾಗಿ ಏಳಲಿದೆ. ಈ ಕೂಗಿನ ಲಾಭ ಪಡೆದು ಸುಮಾರು 65 ಸಾವಿರದಷ್ಟು ಇರುವ ಈ ಸಂಘಟನೆಗಳ ಸದಸ್ಯರು ಜಿಹಾದ್ ಅನ್ನು ಮುಂದುವರಿಸಲಿದ್ದಾರೆಂದು ವರದಿಯಲ್ಲಿ ಎಚ್ಚರಿಸಲಾಗಿದೆ.

Write A Comment