ಮನೋರಂಜನೆ

ಪಂಚರಂಗಿ: ನಾನಿ ಮನೆಯ ಗಾನ…

Pinterest LinkedIn Tumblr

NAANI‘ಗುಜರಾತ್ ಜಿಲ್ಲೆಯ ನವಸಾರಿ ಗ್ರಾಮದಲ್ಲಿ 32 ಕೊಠಡಿಗಳು ಇರುವ ಒಂದು ಮನೆಯಲ್ಲಿ ಎಣಿಸಲಾರದಷ್ಟು ಬಾವಲಿಗಳು. ಒಂದು ಅಡಿ ಕಸ, ಇವೆಲ್ಲವನ್ನು ಶುದ್ಧ ಮಾಡಿಸಿ ಚಿತ್ರೀಕರಣ ಮಾಡಿದ್ದು ತ್ರಾಸಿನ ಕೆಲಸವಾಯಿತು’ ಹೀಗೆ ಚಿತ್ರೀಕರಣದ ಅನುಭವಗಳನ್ನು ಹೇಳುತ್ತಾ ಹೋದರು ನಿರ್ದೇಶಕ ರಾಘವೇಂದ್ರ ಕೆ. ಗೊಲ್ಲಹಳ್ಳಿ.

ಅದು ‘ನಾನಿ’ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭ. ಹಾರರ್ ಚಿತ್ರಕಥೆಯಾದ ನಾನಿ ನೈಜ ಘಟನೆಯನ್ನು ಆಧರಿಸಿದ ಚಿತ್ರವಂತೆ. ‘ಸುಹಾಸಿನಿ ಅವರಿಗೆ ಇ–ಮೇಲ್‌ನಲ್ಲಿ ಚಿತ್ರಕತೆ ಕಳುಹಿಸಿದೆ. ಅದನ್ನು ಓದಿ  ಒಪ್ಪಿಕೊಂಡರು. ಕೆಲವು ಕೆಟ್ಟ ಅನುಭವಗಳಿಂದ ಸಿನಿಮಾ ಮಾಡುವುದು ತಡ ಆಯಿತು. ನಿರ್ಮಾಪಕರು ನನಗೆ ತಂದೆ ಸಮಾನ. ನಾನು ಹೊಸಬನೆಂದು ತಿಳಿದುಕೊಂಡಿದ್ದರೂ ಅವಕಾಶ ಕೊಟ್ಟಿದ್ದಾರೆ’ ಎಂದರು ನಿರ್ದೇಶಕರು.

ಮದರ್‌ ತೆರೇಸಾ ಅವರಂಥ ಪಾತ್ರ ಮಾಡಿದ್ದಾರಂತೆ ಹಿರಿಯ ನಟಿ ಕಿಶೋರಿ ಬಲ್ಲಾಳ್. ‘ಸಹಜತೆ, ನೈಜತೆ ಇರುವ ಚಿತ್ರವು ಶತದಿನ ಆಚರಿಸಲಿ’ ಎಂದು ಶುಭ ಹಾರೈಸಿದರು ಅವರು. ರಾಜಸ್ತಾನದ ಮೂಲಕ ರಮೇಶ್ ಕುಮಾರ್ ಜೈನ್ ಈ ಕನ್ನಡ ಚಿತ್ರ ನಿರ್ಮಿಸಿರುವುದನ್ನು ಕೊಂಡಾಡಿದ್ದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು.

ನಾಯಕ ಮನೀಷ್, ನಾಯಕಿ ಪ್ರಿಯಾಂಕಾ ರಾವ್, ಬೇಬಿ ಸುಹಾಸಿನಿ, ಜೈಜಗದೀಶ್ ತಮ್ಮ ಪಾತ್ರದ ಕುರಿತು ಮಾತನಾಡಿದರು. ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್, ಚಿತ್ರಕಥೆಗಾರ ಬಿ.ಎ.ಮಧು, ಸಮಾಜ ಸೇವಕ ಕೃಷ್ಣಮೂರ್ತಿ, ಲಹರಿ ವೇಲು, ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಹಾಜರಿದ್ದು ಚಿತ್ರತಂಡಕ್ಕೆ ಶುಭಕೋರಿದರು. ಇದಕ್ಕೂ ಮುನ್ನ ಚಿತ್ರದ ಟ್ರೇಲರ್, ಹಾಡುಗಳ ತುಣುಕುಗಳನ್ನು ತೋರಿಸಲಾಯಿತು. ಬೆಂಗಳೂರಿನಲ್ಲಿ ನೆಲೆಸಿರುವ ರಾಜಸ್ತಾನ ಮೂಲದ ರಮೇಶ್‌ಕುಮಾರ್‌ ಜೈನ್‌ ಬಂಡವಾಳ ಹೂಡಿದ್ದಾರೆ.

Write A Comment