ರಾಷ್ಟ್ರೀಯ

ಗಡಿಭಾಗಕ್ಕೆ ಎಂಜಿನೀಯರ್ಸ್ ಗಳನ್ನು ಕರೆದೊಯ್ಯುತ್ತಿದ್ದ ಬಿಎಸ್ಎಫ್ ವಿಮಾನ ಹೊತ್ತಿ ಉರಿದು 10 ಮಂದಿ ಸೈನಿಕರ ದುರ್ಮರಣ

Pinterest LinkedIn Tumblr

BSF-trooper

ನವದೆಹಲಿ: ಗಡಿಭಾಗಕ್ಕೆ ಎಂಜಿನೀಯರ್ಸ್ ಗಳನ್ನು ಕರೆದೊಯ್ಯುತ್ತಿದ್ದ ಬಿಎಸ್ಎಫ್ ವಿಮಾನ ಹೊತ್ತಿ ಉರಿದು 10 ಮಂದಿ ಸಾವನ್ನಪ್ಪಿರುವ ಘಟನೆ ದೆಹಲಿಯ ದ್ವಾರಾಕಾದಲ್ಲಿ ಸಂಭವಿಸಿದೆ.

ಸೂಪರ್ ಕಿಂಗ್ ಹೆಸರಿನ ಬಿಎಸ್ ಎಫ್ ವಿಮಾನ ದೆಹಲಿಯಿಂದ ರಾಂಚಿಗೆ ತೆರಳುತ್ತಿತ್ತು. ವಿಮಾನ ನಿಲ್ದಾಣದಿಂದ ಟೇಕಾಫ್ ಆದ 5 ನಿಮಿಷದಲ್ಲೇ ವಿಮಾನ ನಿಲ್ದಾಣದ ಗೋಡೆಗೆ ಡಿಕ್ಕಿ ಹೊಡೆದ ಸೂಪರ್ ಕಿಂಗ್ ಲಘು ವಿಮಾನ ಸಂಪೂರ್ಣ ಹೊತ್ತಿ ಉರಿದಿದೆ.

ವಿಮಾನದಲ್ಲಿ ಸೈನಿಕರು, ಸೇರಿದಂತೆ ಒಟ್ಟು 12 ಮಂದಿ ಇದ್ದರೆಂದು ಹೇಳಲಾಗುತ್ತಿದೆ. ಬಿಎಸ್ ಎಫ್ ಕಮಾಂಡರ್ ಕೂಡ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಎರಡು ಶವಗಳು ಪತ್ತೆಯಾಗಿದ್ದು, ಸ್ಥಳಕ್ಕೆ 15 ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ.

ಇನ್ನು ಘಟನಾ ಸ್ಥಳಕ್ಕೆ ಗೃಹ ಸಚಿವ ರಾಜನಾಥ್ ಸಿಂಗ್ ಆಗಮಿಸಿದ್ದಾರೆ. ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿರಬಹುದೆಂದು ಹೇಳಲಾಗುತ್ತಿದೆ. ಪ್ರಕರಣದ ತನಿಖೆಗೆ ಕೇಂದ್ರ ವಿಮಾನಯಾನ ಸಚಿವಾಲಯ ಆದೇಶಿಸಿದೆ.

Write A Comment