ಮನೋರಂಜನೆ

ಸಲ್ಮಾನ್‌ ಆಟೋ ಸವಾರಿ: ಸಾವಿರ ರೂಪಾಯಿ ಬಾಡಿಗೆ!

Pinterest LinkedIn Tumblr

salman-autoಮುಂಬೈ: ಬಾಲಿವುಡ್‌ ಖ್ಯಾತ ನಟ ಸಲ್ಮಾನ್‌ ಖಾನ್‌ ಇತ್ತೀಚೆಗೆ ಹಿಟ್‌ ಆ್ಯಂಡ್‌ ರನ್‌ ಪ್ರಕರಣದಲ್ಲಿ ನ್ಯಾಯಾಲಯದಿಂದ ದೋಷ ಮುಕ್ತರಾಗಿದ್ದರು. ಇದರ ಬೆನ್ನಲ್ಲೇ ಅವರು ರಿಕ್ಷಾ ಸವಾರಿ ಮಾಡಿ ಸುದ್ದಿ ಮಾಡಿದ್ದಾರೆ.

ಸಲ್ಮಾನ್‌ ಪಾರ್ಟಿ ಮುಗಿಸಿಕೊಂಡು ಆಟೋ ರಿಕ್ಷಾ ಏರಿ ತಮ್ಮ ಮನೆ ತಲುಪಿದ್ದಾರೆ, ಅಲ್ಲದೇ ಆಟೋ ಚಾಲಕನಿಗೆ 1,000 ರೂ. ಆಟೋ ದರ ನೀಡಿದ್ದಾರೆ.

ಸಲ್ಮಾನ್‌ ಸೋದರ ಸೊಹೇಲ್‌ ಖಾನ್‌ರ 46ನೇ ಹುಟ್ಟು ಹಬ್ಬದ ಕಾರಣ ಕುಟುಂಬದವರೆಲ್ಲ ಬಾಂದ್ರಾದ ನೈಟ್‌ಕ್ಲಬ್‌ ಒಂದರಲ್ಲಿ ಸಂತೋಷಕೂಟಕ್ಕಾಗಿ ಸೇರಿದ್ದರು. 1 ಗಂಟೆವರೆಗೂ ಪಾರ್ಟಿ ನಡೆಯಿತು. ಬಳಿಕ ಎಲ್ಲರೂ ತಮ್ಮ ತಮ್ಮ ಕಾರುಗಳನ್ನು ಚಲಾಯಿಸಿಕೊಂಡು ಹೊರಟರು. ಅದರೆ ಸಲ್ಮಾನ್‌ ರಿಕ್ಷಾ ಏರಿ ತಮ್ಮ ಮನೆ ತಲುಪಿದರು. ಸಲ್ಮಾನ್‌ ರಿಕ್ಷಾ ಸವಾರಿ ಆಸಕ್ತಿ ಈ ಹಿಂದೆಯೂ ಕಂಡುಬಂದಿತ್ತು.
-ಉದಯವಾಣಿ

Write A Comment