ರಾಷ್ಟ್ರೀಯ

ರಾಷ್ಟ್ರಗೀತೆ ಬದಲಾವಣೆ ಮಾಡುವಂತೆ ಪ್ರಧಾನಿ ಮೋದಿಗೆ ಸುಬ್ರಮಣಿಯನ್ ಸ್ವಾಮಿ ಒತ್ತಾಯ

Pinterest LinkedIn Tumblr

ss-swamyನವದೆಹಲಿ:  ಜನಗಣಮನ ರಾಷ್ಟ್ರಗೀತೆಯಲ್ಲಿ ಬದಲಾವಣೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಪತ್ರ ಬರೆದಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಬರೆದಿದ್ದ ರಾಷ್ಟ್ರಗೀತೆಯ ಕೆಲವು ಪದಗಳನ್ನು ಬದಲಾವಣೆ ಮಾಡುವಂತೆ ಮನವಿ ಮಾಡಿದ್ದಾರೆ.

1949 ರ ನವೆಂಬರ್  26 ರಂದು ಶಾಸನ ಸಭೆಯಲ್ಲಿ ರಾಷ್ಟ್ರಗೀತೆ ಅಂಗೀಕಾರ ಮಾಡುವಾಗ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಸಂಸತ್ತಿನಲ್ಲಿ ಬದಲಾವಣೆ ಮಾಡಬಹುದು ಎಂದು ಹೇಳಿದ್ದಾರೆ.

ಕೊಲ್ಕೋತ್ತಾದಲ್ಲಿ ಒರಿಜಿನಲ್ ರಾಷ್ಟ್ರಗೀತೆಯನ್ನು ಬದಲಾವಣೆ ಮಾಡಲಾಯಿತು. ಈಗ ಇರುವ ರಾಷ್ಟ್ರಗೀತೆಯನ್ನು ಸಂಪೂರ್ಣ ಬದಲಾವಣೆ ಮಾಡುವುದು ಬೇಡ. ಅದರಲ್ಲಿರುವ ಕೆಲ ಪದಗಳನ್ನು ಬದಲಾಯಿಸುವಂತೆ ಸ್ವಾಮಿ ಪತ್ರದಲ್ಲಿ ಬರೆದಿದ್ದಾರೆ.

ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿದ್ದಾಗ ಸುಭಾಷ್ ಚಂದ್ರ ಬೋಸ್ ರಾಷ್ಟ್ರಗೀತೆಯಲ್ಲಿ ಸಂಸ್ಕೃತ ಪದಗಳನ್ನು ಸೇರಿಸಿದ್ದರು. ಅನಂತರ ಬ್ರಿಟಿಷ್ ದೊರೆ ಅದರಲ್ಲಿನ ಕೆಲ ಪದಗಳನ್ನು ಬದಲಾಯಿಸಿದರು ಎಂದು ಸ್ವಾಮಿ ತಿಳಿಸಿದ್ದಾರೆ.

Write A Comment