ಕರ್ನಾಟಕ

ನಿಧಿ ಎಂದು ನಂಬಿಸಿ ನಕಲಿ ಚಿನ್ನ ನೀಡಿ ವಂಚಿಸುತ್ತಿದ್ದ ವಂಚಕರ ತಂಡ ಸೆರೆ

Pinterest LinkedIn Tumblr

nidhiಹಿರಿಯೂರು, ಡಿ.22- ನಿಧಿ ಸಿಕ್ಕಿದೆ ಎಂದು ಹೇಳಿ ನಕಲಿ ಬಂಗಾರ ನೀಡಿ ಅಮಾಯಕರಿಗೆ ಮಂಕು ಬೂದಿ ಎರಚುತ್ತಿದ್ದ ವಂಚಕರ ತಂಡವನ್ನು ಹಿರಿಯೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನೀಲಕಂಠಾಚಾರಿ, ರಾಜ, ರಾಮಕೃಷ್ಣ  ಎಂದು ತಿಳಿದು ಬಂದಿದ್ದು , ಪರಾರಿಯಾಗುವಾಗ ಪೊಲೀಸರ ಸಮಯ ಪ್ರಜ್ಞೆಯಿಂದ ಟಿವಿ ಸರ್ಕಲ್ ಬಳಿ ಪತ್ತೆ ಮಾಡಿ ಇವರುಗಳನ್ನು ವಶಕ್ಕೆ ಪಡೆದು 1,94,000 ರೂ.ಗಳ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯ ವಿವರ: ಬೆಂಗಳೂರಿನ ಓಂಕಾರಾಶ್ರಮದಲ್ಲಿ ವಾಹನ ನಿಲುಗಡೆ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ರಾಮನಗರದ ಸುನೀಲ್ ಅವರಿಗೆ ಅಲ್ಲೇ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ ಮೋಹನ್ ಬಂಗಾರ ಕಡಿಮೆ ದರಕ್ಕೆ ಸಿಗುತ್ತಿದೆ. ಅದನ್ನು ಪಡೆದು ಮಾರಿದರೆ ಹೆಚ್ಚಿನ ಹಣ ಸಿಗುತ್ತದೆ ಎಂದು ಹೇಳಿದ್ದ.

ಅದರಂತೆ ಚಳ್ಳಕೆರೆಯ ನೀಲಕಂಠಾಚಾರಿ ನಿಧಿ ಸಿಕ್ಕಿದ್ದು , ಅದರಲ್ಲಿ ಸುಮಾರು 150 ಗ್ರಾಂ ಬಂಗಾರವನ್ನು 2.20ಲಕ್ಷಕ್ಕೆ ಕೊಡುತ್ತಿದ್ದಾರೆ ಎಂದು ತಿಳಿಸಿದ್ದ.

ಇದರಂತೆ ಚೌಕಾಸಿ ಮಾಡಿ 1.90 ಲಕ್ಷಕ್ಕೆ ಚಿನ್ನ ಪಡೆಯೋಣ ಎಂದು ಹೇಳಿ  ಹಣ ಹೊಂದಿಸಿಕೊಂಡ ಈ ಇಬ್ಬರು ಡಿ.19ರಂದು ಹಿರಿಯೂರಿಗೆ ತೆರಳಿದ್ದರು. ಸಂಜೆ 7 ಗಂಟೆ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬಂದ ಆರೋಪಿಗಳಾದ ನೀಲಕಂಠಾಚಾರಿ ಮತ್ತು ಮೋಹನ್ ಎಂಬುವರು ನಕಲಿ ಚಿನ್ನವನ್ನು ಅವರಿಗೆ ನೀಡಿದ್ದರು. ಇದರ ಗುಣಮಟ್ಟದ ಬಗ್ಗೆ ಅರಿವಿಲ್ಲದೆ ಸುನೀಲ್ ಮತ್ತು ಮೋಹನ್ ಅಲ್ಲೇ ಯಾಮಾರಿದ್ದರು. ನಂತರ ಆರೋಪಿಗಳು ಅಲ್ಲಿಂದ ತೆರಳಿದ ನಂತರ ಪೊಲೀಸ್ ವೇಷದಲ್ಲಿ ಪೊಲೀಸ್ ಎಂದು ಹೇಳಿಕೊಂಡು ಬಂದ ರಾಜ ಎಂಬಾತ ನೀವು ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದೀರಿ ಎಂದು ಹೇಳಿ ಮೋಹನ್‌ನನ್ನು ಕೂಡಿಸಿಕೊಂಡು ಹೋದರು.

ಇದರಿಂದ ಗಾಬರಿಗೊಂಡ ಸುನೀಲ್ ನಾವೆಲ್ಲೋ ಮೋಸ ಹೋಗುತ್ತಿದ್ದೇವೆ ಎಂದು ಅರಿತು ತಕ್ಷಣ ಹಿರಿಯೂರು ಠಾಣೆಗೆ ಬಂದು ವಿಷಯವನ್ನು ತಿಳಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಮೋಹನ್ ಕೂಡ ಕಾಣಿಸಿಕೊಂಡಿದ್ದಾನೆ.  ಹಿರಿಯೂರು ನಗರ ಠಾಣೆಯ ಪಿಎಸ್‌ಐ ಶಿವಕುಮಾರ್ ಅವರು ನೀಲಕಂಠಾಚಾರಿ ಮತ್ತು ರಾಮಕೃಷ್ಣ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ವಂಚಿಸಿರುವುದು ತಿಳಿದು ಬಂದಿದೆ.  ಆರೋಪಿಗಳನ್ನು 1.95 ಲಕ್ಷ ಹಣವನ್ನು ಕೂಡ ಜಪ್ತಿ ಮಾಡಿದ್ದಾರೆ.

Write A Comment