ಕನ್ನಡ ವಾರ್ತೆಗಳು

ಆಳ್ವಾಸ್ ವಿರಾಸತ್‌ : ಸಂಗೀತ ಪ್ರೇಮಿಗಳನ್ನು ರಂಜಿಸಿದ ಬಾಲಸುಬ್ರಹ್ಮಣ್ಯಂ ಗಾಯನ

Pinterest LinkedIn Tumblr

spb_prg_1

ಮೂಡುಬಿದಿರೆ, ಡಿ.26: ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್‌ನ ಮೊದಲ ದಿನದ ಎರಡನೆ ಕಾರ್ಯಕ್ರಮವಾದ ಸಂಗೀತ ರಸಮಂಜರಿಯಲ್ಲಿ ‘ಮೋಕೆದ ಸಿಂಗಾರಿ…ಉಂತುದೆ ವಯ್ಯರಿ… ಯಾನೇ ಮೂಲು ಕಾತೊಂದುಲ್ಲೆ ಮದತೇ ಪೋಪನಾ…’’ ಎಂಬ ತುಳು ಹಾಡು ಖ್ಯಾತ ಗಾಯಕ ಪದ್ಮಶ್ರೀ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಕಂಠಸಿರಿಯಲ್ಲಿ ಕೇಳುವ ಭಾಗ್ಯ ಸಂಗೀತ ಪ್ರೇಮಿಗಳದಾಯಿತು.

ಎಸ್‌ಪಿಬಿ ಕನ್ನಡ, ತುಳು, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರಗಳ ಹಾಡುಗಳನ್ನು ಹಾಡುವ ಮೂಲಕ ಸೇರಿದ್ದ ಜನರ ಚಪ್ಪಾಳೆ ಗಿಟ್ಟಿಸಿಕೊಂಡರು.

spb_prg_2 spb_prg_3 spb_prg_4 spb_prg_5 spb_prg_6 spb_prg_7 spb_prg_8 spb_prg_9 spb_prg_10 spb_prg_11 spb_prg_12 spb_prg_13

‘ಹೊಂಬಿಸಿಲು’ ಚಲನಚಿತ್ರದ ‘ಜೀವ ವೀಣೆ ನೀನು ಮಿಡಿತದ ಸಂಗೀತ’ ಎಂಬ ಹಾಡಿನೊಂದಿಗೆ ರಸಮಂಜರಿಯನ್ನು ಆರಂಭಿಸಿದ ಎಸ್‌ಪಿಬಿ, ಗೀತಾ ಚಿತ್ರದ ‘ಜೊತೆಯಲಿ ಜೊತೆ ಜೊತೆಯಲಿ’, ಶ್ರೀ ಮಂಜುನಾಥ ಚಿತ್ರದ ‘ಈ ಪಾದ ಪುಣ್ಯ ಪಾದ’, ರೋಜಾ ಚಿತ್ರದ ‘ರೋಜಾ ಜಾನೆ ಮನ್’, ಡ್ಯುಯೆಟ್ ಚಿತ್ರದ ‘ಅಂಜಲಿ ಅಂಜಲಿ ಪುಷ್ಪಾಂಜಲಿ’, ದೇವರ ದುಡ್ಡು ಚಿತ್ರದ ‘ತರಿ ಕೇರಿ ಏರಿ ಮೇಲೆ’, ಪಲ್ಲವಿ ಅನುಪಲ್ಲವಿ ಚಿತ್ರದ ‘ನಗುವಾ ನಯನಾ ಮಧುರಾ ವೌನ’ ಹಾಗೂ ಡಾ.ಎಂ.ಮೋಹನ ಆಳ್ವರ ಕೋರಿಕೆಯ ಮೇರೆಗೆ ‘ಶಂಕರಾಭರಣ’ ಚಲನಚಿತ್ರದ ‘ಶಂಕರಾ ನಾದ ಶರೀರ’ ಹಾಡನ್ನು ಹಾಡಿ ಸಭಿಕರನ್ನು ರಂಜಿಸಿದರು.

ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಎಸ್.ಪಿ.ಬಿ. ಅವರಿಗೆ ಅರ್ಚನಾ ಉಡುಪ ಮತ್ತು ಪೂರ್ಣಿಮಾ ಸಹಕರಿಸಿದರು. ಶ್ರೀನಿವಾಸ, ರಮೇಶ್ಚಂದ್ರ ಗೀತೆಗಳನ್ನು ಹಾಡಿದರು. ಉಳಿದಂತೆ ಅಶ್ವಿನಿ, ಶೃತಿ ಕಾರ್ತಿಕ್ ಮತ್ತು ವೇಣುಗೋಪಾಲ್ ಹಿಮ್ಮೇಳನದಲ್ಲಿ ಸಹಕರಿಸಿದರು.

Write A Comment