ಮಂಗಳೂರು,ಡಿ.26: ಕೇಬಲ್ ಟಿವಿ ರೆಗ್ಯುಲೇಟರ್ ಆಕ್ಟ್ ತಿದ್ದುಪಡಿ ಪ್ರಕಾರ ಕೇಬಲ್ ಗಳನ್ನು ಸೆಟ್ ಆಪ್ ಬಾಕ್ಸ್ ಗಳಾಗಿ ಪರಿವರ್ತಿಸಬೇಕೆಂದು ಆದೇಶ ನೀಡಲಾಗಿತ್ತು. ಮೊದಲ 2 ಹಂತ ಸಂಪೂರ್ಣವಾಗಿದ್ದು, 3ನೇ ಹಂತ ಪ್ರಕಾರ 2015 ಡಿಸೆಂಬರ್ 31ರೊಳಗೆ ನಗರ ಪ್ರದೇಶದಲ್ಲಿನ ಎಲ್ಲಾ ಕೇಬಲ್ ಗಳ ಬದಲು ಸೆಟ್ ಆಪ್ ಬಾಕ್ಸ್ ನ್ನು ಅಳವಡಿಸಬೇಕಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೇಬಲ್ ಆಪರೇಟರ್ ಗಳ ಸಭೆಯಲ್ಲಿ ಹೇಳಿದರು.
ಸೆಟ್ ಆಪ್ಗ್ ಬಾಕ್ಸ್ ಅಳವಡಿಸುವ ಬಗ್ಗೆ ಈಗಾಗಲೇ ಎಲ್ಲಾ ಕೇಬಲ್ ಆಪರೇಟರ್ಸ್ ಗಳಿಗೆ ಜನವರಿ 1,2015 ರಂದು ತಿಳಿಸಲಾಗಿದ್ದು. ಆದರೂ ಕೇಬಲ್ ಆಪರೇಟರ್ಸ್ ಇನ್ನೂ ಈ ಬಗ್ಗೆ ಹೆಚ್ಚಿನ ಗಮನ ನೀಡಿರಲಿಲ್ಲ. ಇನ್ನು ಇರುವ 6 ದಿನಗಳೊಳಗೆ ಸೆಟ್ ಆಪ್ ಬಾಕ್ಸ್ ಕಡ್ಡಾಯವಾಗಿ ಅಳವಡಿಸಲೇ ಬೇಕೆಂದು ಹೇಳಿದರು . 2016 ಜನವರಿ 1 ರ ನಂತರ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ 4ನೇ ಹಂತದ ಸೆಟ್ ಆಪ್ ಬಾಕ್ಸ್ ಅಳವಡಿಕೆಗೆ ಸೂಚಿಸಲಾಗುವುದು ಎಂದರು.
ಸಭೆಯಲ್ಲಿ ಕೇಬಲ್ ಆಪರೇಟರ್ಸ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು,6 ದಿನದಲ್ಲಿ ಸೆಟ್ ಆಪ್ ಬಾಕ್ಸನ್ನು ಅಳವಡಿಸುವುದು ಕಷ್ಟ. ಸೆಟ್ ಆಪ್ ಬಾಕ್ಸ್ ಗಳನ್ನು ಅಳವಡಿಸುವಾಗ ತಾಂತ್ರಿಕ ತೊಂದರೆ ಕಾಣಿಸಿಕೊಳ್ಳುತ್ತವೆ. ಆದರಿಂದ ಅದನ್ನು ಸರಿಪಡಿಸಲು ಹೆಚ್ಚಿನ ಸಮಯಾವಕಾಶ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸ್ವಲ್ಪ ಕಾಲವಕಾಶ ನೀಡುವಂತೆ ಕೋರಿದರು.
ಸಭೆಯಲ್ಲಿ ದ.ಕ.ವಾರ್ತಾಧಿಕಾರಿ ಖಾದರ್ ಶಾ, ಕೇಬಲ್ ಆಪರೇಟರ್ಸ್ ವಿಶ್ವಾಸ್ ದಾಸ್, ಶ್ರೀನಿವಾಸ್ ಕಿಣಿ, ಬಿ.ಆರ್.ಬಾಳಿಗಾ, ಹರೀಶ್ ಕರ್ಕೇರಾ ಮೊದಲಾದವರು ಉಪಸ್ಥಿತರಿದ್ದರು.