ನನ್ನ ರಾಜಕೀಯ ಬದ್ಧತೆಯಿಂದಾಗಿ ನಾನು ಚಿತ್ರರಂಗದ ಉತ್ತುಂಗದಲ್ಲಿದ್ದಾಗಲೇ ರಾಜಕಾರಣಿಯಾಗಿಬಿಟ್ಟೆ. ಅಂದಿನ ಆ ಸಿನಿಮಾ ಕಲಾವಿದೆ ಜಯಪ್ರದ ರಾಜಕಾರಣದಲ್ಲಿ ಕಳೆದುಹೋಗಿಬಿಟ್ಟಳು. ರಾಜಕಾರಣಿ ಜಯಾ ಉಳಿದಳು. ನನ್ನ ತಪ್ಪಿನ ಅರಿವಾಯಿತೀಗ. ಹಾಗಾಗಿ ನಾ ಮತ್ತೆ ನಿಮ್ಮ ಜಯಪ್ರದಾ ಆಗಲು ಹೊಸ ಸಾಹಸ ಮಾಡುತ್ತಿದ್ದೇನೆ. ನಾನೀಗ ನನ್ನ ತೂಕ ತಗ್ಗಿಸಿಕೊಂಡಿದ್ದೇನೆ. ಯಾವಾಗ ನನ್ನಲ್ಲಿ ಜ್ಞಾನೋದಯವಾಯಿತೊ ಆಗಲೇ ನಾನು ಮತ್ತೆ ಹಳೆಯ ಜಯಪ್ರದಾ ಆಗಬೇಕು… ಆಗುತ್ತೇನೆ.
ಇನ್ನು ಕೆಲವೇ ದಿನಗಳಲ್ಲಿ ಹೊಸ ಸಿನಿಮಾ ಮೂಲಕ ನಿಮ್ಮ ಮುಂದೆ ಬರಲಿದ್ದೇನೆ. ಸಿದ್ಧತೆಗಳೂ ನಡೆದಿವೆ. ಇನ್ನು ಬಣ್ಣ ಹಚ್ಚುವುದೇ ಬಾಕಿ… ಹೀಗೆ… ತಾನು ಚಿತ್ರರಂಗದಿಂದ ದೂರ ಆಗಿ ಮಾಡಿಕೊಂಡ ನಷ್ಟದ ಬಗ್ಗೆ ಭಾವನಾತ್ಮಕವಾಗಿ ಮಾತನಾಡುತ್ತ ಹೋದವರು ನಟಿ ಕಮ್ ರಾಜಕಾರಣಿ ದಕ್ಷಿಣ ಭಾರತದ ಸ್ನಿಗ್ಧ ಸುಂದರಿ ಜಯಪ್ರದಾ.
ಸ್ಯಾಂಡಲ್‌ವುಡ್‌ನಿಂದ ಹಿಡಿದು ಬಾಲಿವುಡ್‌ವರೆಗೆ ಯಶಸ್ವಿ ಪ್ರಯಾಣ ಮಾಡಿ ಹೆಸರು ಮಾಡಿ, ಆ ಅಲೆಯಲ್ಲೇ ರಾಜಕೀಯ ಪ್ರವೇಶಿಸಿ ಅಲ್ಲೂ ಯಶಸ್ವಿಯಾದ ಜಯಾ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುತ್ತಿದ್ದಾ ರಂತೆ. ಅಭಿಮಾನಿ ಗಳ ಪಾಲಿ ಗಂತೂ ಇದು ಸಂತಸದ ಸುದ್ದಿಯೇ…