ಮನೋರಂಜನೆ

‘ಕಿಲ್ಲಿಂಗ್ ವೀರಪ್ಪನ್’ ಚಿತ್ರದ ಟ್ರೇಲರ್ ಇಷ್ಟಪಟ್ಟ ಬಚ್ಚನ್

Pinterest LinkedIn Tumblr

veಮುಂಬೈ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರದ ಟ್ರೇಲರ್ ಗೆ ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಮತ್ತು ರಿತೇಶ್ ದೇಶಮುಖ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ಅದ್ಭುತ ಟ್ರೈಲರ್’ ಎಂದು ಟ್ವಿಟ್ಟರ್ ನಲ್ಲಿ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.ರಾಮ್ ಗೋಪಾಲ್ ವರ್ಮಾ ರ ನಿಶಬ್ದ್, ಸರ್ಕಾರ್,  ‘ರಾಮ್ ಗೋಪಾಲ್ ವರ್ಮಾ ಕಿ ಆಗ್’ ಚಿತ್ರಗಳಲ್ಲಿ ನಟಿಸಿರುವ ಅಮಿತಾಬ್ ಬಚ್ಚನ್ ಕಿಲ್ಲಿಂಗ್ ವೀರಪ್ಪನ್ ಸಿನಿಮಾದ ಟ್ರೈಲರ್ ಗೆ ಪ್ರಸಂಶೆ ವ್ಯಕ್ತಪಡಿಸಿರುವುದು ಚಿತ್ರ ಯಶಸ್ಸಿನ ಸೂಚನೆಗಳಾಗಿವೆ.

ಈ ಚಿತ್ರವು ಕುಖ್ಯಾತ ಕಾಡುಗಳ್ಳ ವೀರಪ್ಪನ್ ಜೀವನ ಚರಿತ್ರೆಯಾಧರಿತ ಕಥೆಯಾಗಿದ್ದು, ವೀರಪ್ಪನ್ ಎನ್ ಕೌಂಟರ್ ಅನ್ನು ವಿಭಿನ್ನ ಶೈಲಿಯಲ್ಲಿ ಚಿತ್ರಿಸಲಾಗಿದೆ.

ಹೊಸ ವರ್ಷ (ಜ. 1)ಕ್ಕೆ ‘ಕಿಲ್ಲಿಂಗ್ ವೀರಪ್ಪನ್’ ಭರ್ಜರಿಯಾಗಿ ತೆರೆ ಕಾಣಲಿದ್ದು, ಚಿತ್ರದಲ್ಲಿ ಶಿವಣ್ಣ, ಪಾರುಲ್ ಯಾದವ್, ಯಜ್ಞಾ ಶೆಟ್ಟಿ, ಸಂದೀಪ್ ಭಾರದ್ವಾಜ್, ಸಂಚಾರಿ ವಿಜಯ್ ಮುಂತಾದವರು ಪ್ರಮುಖವಾಗಿ ಮಿಂಚಿದ್ದಾರೆ.

ಇದೀಗ ಚಿತ್ರದ ಟ್ರೈಲರ್, ಹಾಡುಗಳಿಗೆ ವ್ಯಾಪಕ ಜನಮೆಚ್ಚುಗೆ ವ್ಯಕ್ತವಾಗಿದ್ದು, ಬಹುನಿರೀಕ್ಷಿತ ಚಿತ್ರ ಇದಾಗಿದೆ. ಅಲ್ಲದೇ ಸಾಮಾನ್ಯ ಪ್ರೇಕ್ಷಕರಿಗಿಂತ ಮೊದಲು ಈ ಚಿತ್ರವನ್ನು ಪೊಲೀಸ್ ಅಧಿಕಾರಿಗಳಿಗೆ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿರುವುದು ಇನ್ನೊಂದು ವಿಶೇಷವಾಗಿದೆ.

Write A Comment